ಬೆಂಗಳೂರು: ‘ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿನ ಮೂಲಸೌಕರ್ಯ ಸೇರಿದಂತೆ ಇತರೆ ಅಂಶಗಳ ತಪಾಸಣಾ ವರದಿಗಳನ್ನು ಆಯಾ ನರ್ಸಿಂಗ್ ಸಂಸ್ಥೆಗಳು ವೆಬ್ ಪೋರ್ಟಲ್ನಲ್ಲಿ ಕಾಲಕಾಲಕ್ಕೆ ಅಪ್ಲೋಡ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೈಕೋರ್ಟ್ ಸಂಬಂಧಿಸಿದ ಪ್ರಾಧಿಕಾರಗಳಿಗೆ ಆದೇಶಿಸಿದೆ.

ಈ ಸಂಬಂಧ, 'ಕರ್ನಾಟಕ ರಾಜ್ಯ ಖಾಸಗಿ ಆರೋಗ್ಯ ಸಂಸ್ಥೆಗಳ ನಿರ್ವಹಣಾ ಒಕ್ಕೂಟ’ ಮತ್ತು ‘ಕರ್ನಾಟಕ ರಾಜ್ಯ ನರ್ಸಿಂಗ್ ಮತ್ತು ಇತರೆ ಆರೋಗ್ಯ ಸಂಬಂಧಿ ಸಂಸ್ಥೆಗಳ ನಿರ್ವಹಣಾ ಒಕ್ಕೂಟ’ ಸಲ್ಲಿಸಿದ್ದ ಅರ್ಜಿಗಳ ಮನವಿಯನ್ನು ಮಾನ್ಯ ಮಾಡಲು ನಿರಾಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ನರ್ಸಿಂಗ್ ಕೋರ್ಸ್ಗಳಿಗೆ ಸೇರುವ ವಿದ್ಯಾರ್ಥಿಗಳು ಯಾವ ಸಂಸ್ಥೆಗಳ ಕಾಲೇಜಿನಲ್ಲಿ ಸೀಟು ಪಡೆಯಬೇಕು, ಕಾಲೇಜುಗಳು ಮತ್ತು ಅವುಗಳ ಸಂಸ್ಥೆಗಳ ಮೂಲಸೌಕರ್ಯ, ಅಲ್ಲಿನ ವ್ಯವಸ್ಥೆ ಹೇಗಿದೆ ಎಂಬೆಲ್ಲಾ ವಿವರಗಳನ್ನು ಪಡೆಯಲು ಸದ್ಯಕ್ಕೆ ಯಾವುದೇ ವ್ಯವಸ್ಥೆ ಇಲ್ಲ’ ಎಂಬುದನ್ನು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

‘ಈ ನಿಟ್ಟಿನಲ್ಲಿ, ತಪಾಸಣಾ ವರದಿಗಳನ್ನು ಆಯಾ ನರ್ಸಿಂಗ್ ಸಂಸ್ಥೆಗಳು ವೆಬ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಪೀಠ, ಭಾರತೀಯ ನರ್ಸಿಂಗ್ ಮಂಡಳಿ (ಐಎನ್ಸಿ), ಕರ್ನಾಟಕ ನರ್ಸಿಂಗ್ ಮಂಡಳಿ (ಕೆಎನ್ಸಿ) ಮತ್ತು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಆರ್ಜಿಯುಎಚ್ಎಸ್) ನಿರ್ದೇಶಿಸಿದೆ.

‘ನರ್ಸಿಂಗ್ ಸಂಸ್ಥೆಗಳ ವಿರುದ್ಧ ಯಾವುದೇ ವಿದ್ಯಾರ್ಥಿ, ಪೋಷಕರು, ಶಿಕ್ಷಕರು ಅಥವಾ ಉಪನ್ಯಾಸಕರು ಆನ್ಲೈನ್ ಮೂಲಕವೇ ಐಎನ್ಸಿ, ಕೆಎನ್ಸಿ ಮತ್ತು ಆರ್ಜಿಯುಎಚ್ಎಸ್ಗೆ ದೂರು ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಮತ್ತು ಆ ದೂರುಗಳನ್ನೂ ಅಪ್ಲೋಡ್ ಮಾಡಬೇಕು’ ಎಂದು ಐಎನ್ಸಿ, ಕೆಎನ್ಸಿ ಮತ್ತು ಆರ್ಜಿಯುಎಚ್ಎಸ್ಗೆ ನ್ಯಾಯಪೀಠ ತಾಕೀತು ಮಾಡಿದೆ.

‘ನಿಮ್ಮ ವ್ಯಾಪ್ತಿಯ ನರ್ಸಿಂಗ್ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯಗಳ ಬಗ್ಗೆ ಕೂಲಂಕಷ ತಪಾಸಣೆ ನಡೆಸಿ ವರದಿ ಸಲ್ಲಿಸಿ’ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಎಲ್ಲ ಜಿಲ್ಲಾಧಿಕಾರಿಗಳಿಗೆ 2024ರ ನವೆಂಬರ್ 5ರಂದು ಸೂಚಿಸಿದ್ದರು. ಅರ್ಜಿದಾರರು ಇದನ್ನು ಪ್ರಶ್ನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.