ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದಾನಂದಮೂರ್ತಿ ಹೊಸ ಸಂಶೋಧನೆ ವಿಧಾನ ಪರಿಚಯಿಸಿದ ವಿದ್ವಾಂಸ: ನಾಗಭೂಷಣಸ್ವಾಮಿ

Last Updated 11 ಜನವರಿ 2020, 14:04 IST
ಅಕ್ಷರ ಗಾತ್ರ

ಬೆಂಗಳೂರು:ವಸ್ತುನಿಷ್ಠವಾಗಿಆಕರಗಳನ್ನು ಇಟ್ಟುಕೊಂಡು ಸಂಶೋಧನೆ ಮಾಡುವ ವಿಧಾನವನ್ನು ಕನ್ನಡಕ್ಕೆ ಪರಿಚಯಿಸಿದವರು ಚಿದಾನಂದಮೂರ್ತಿಎಂದು ಬರಹಗಾರ, ವಿಮರ್ಶಕಓ.ಎಲ್‌.ನಾಗಭೂಷಣಸ್ವಾಮಿ ಹೇಳಿದರು.

ಶನಿವಾರ ನಿಧನರಾದ ಹಿರಿಯ ವಿದ್ವಾಂಸ ಚಿದಾನಂದಮೂರ್ತಿ ಅವರೊಂದಿಗಿನ ಒಡನಾಟ ಹಾಗೂ ಭಾಷಾಶಾಸ್ತ್ರ, ಸಂಶೋಧನೆ ಕುರಿತ ನೆನಪುಗಳನ್ನುಓ.ಎಲ್‌.ನಾಗಭೂಷಣಸ್ವಾಮಿ ಅವರು 'ಪ್ರಜಾವಾಣಿ'ಯೊಂದಿಗೆ ಹಂಚಿಕೊಂಡರು.

ಚಿದಾನಂದಮೂರ್ತಿಯವರು ನನ್ನ ನೇರವಾದ ಗುರುಗಳಲ್ಲ ಆದರೆ ನನ್ನ ಚಿಂತನೆ ಮತ್ತು ತಿಳಿವಳಿಕೆಯನ್ನು ಬೆಳೆಸಿದವರು. ಅವರು ಎಷ್ಟು ಮಾನವೀಯ ಹೃದಯ ಹೊಂದಿದ್ದರು ಎಂದರೆ ಒಮ್ಮೆ ನಾನು ಕೋಲ್ಕತ್ತಗೆ ಹೋದ ಸಂದರ್ಭದಲ್ಲಿ ವಯಸ್ಸಿನಲ್ಲಿ ತುಂಬಾ ಕಿರಿಯನಾದ ನನ್ನ ಮತ್ತು ನಮ್ಮ ಕುಟುಂಬವನ್ನು ತುಂಬಾ ಪ್ರೀತಿ ವಿಶ್ವಾಸಗಳಿಂದ ನೋಡಿಕೊಂಡಿದ್ದರು. ಒಬ್ಬ ಹಿರಿಯ ವಿದ್ವಾಂಸ ಎನ್ನುವುದಕ್ಕಿಂತ ಮನೆಯ ಹಿರಿಯನಂತೆ ನೋಡಿಕೊಂಡ ಮನಸು ಅವರದು. ಇದನ್ನು ನೋಡಿದ ಮೇಲೆ ನನಗೆ ಅನಿಸಿದ್ದು, ಅವರು ಬರಿಯ ವಿದ್ವಾಂಸರಲ್ಲ, ಸಾರ್ವಜನಿಕ ಬದುಕಿನಲ್ಲಿ ಬೇರೆಯುವುದಕ್ಕೆ ಹಿಂಜರಿಯದ ವಿದ್ವಾಂಸರು. ಅವರು ಕನ್ನಡ ಚಳವಳಿಯಲ್ಲೂ ಭಾಗವಹಿಸಿದ್ದರು, ಕನ್ನಡ ವಿಶ್ವವಿದ್ಯಾಲಯ ಕಟ್ಟಲು ಬಹುದೊಡ್ಡ ಪಾತ್ರವಹಿಸಿದ್ದರು. ಇಂತಹ ಕೆಲಸಗಳನ್ನು ನೋಡಿದಾಗ ಒಬ್ಬ ವಿದ್ವಾಂಸನ ಸಾರ್ವಜನಿಕ ಮುಖ ಹೇಗಿರಬೇಕು ಎಂಬುದನ್ನುತೋರಿಸಿಕೊಟ್ಟವರು'ಎಂದರು.

‘ಭಾಷಾಶಾಸ್ತ್ರಗಳ ಬಗ್ಗೆ ಅವರು 1960ರ ಕೊನೆಯಲ್ಲಿ ಬರೆದ ಪುಸ್ತಕ ಇಂದಿಗೂ ಕೂಡ ವಿದ್ಯಾರ್ಥಿಗಳಿಗೆ ಒಂದು ಪ್ರಮಾಣ ಗ್ರಂಥವಾಗಿದೆ. ಆ ನಂತರದಲ್ಲಿ ಈ ಚಿಂತನೆಗಳನ್ನು ಒಳಗೊಂಡ ಯಾವುದೇ ಒಂದು ಪುಸ್ತಕ (ಪಠ್ಯಕ್ರಮ ಆಧರಿಸಿ) ಬರಲೇ ಇಲ್ಲ.ವಾಗಾರ್ಥ ಪುಸ್ತಕದಲ್ಲಿ ಭಾಷೆ ಕುರಿತ ಹಲವಾರು ಚಿಂತನೆಗಳಿವೆ. ಅವರು ಭಾಷೆಯಿಂದ ಆರಂಭಿಸಿ ಶಾಸನಗಳ ಅಧ್ಯಯನ ಮಾಡಿದರು, ಶಾಸನದಿಂದ ಕರ್ನಾಟಕದ ಮಧ್ಯಕಾಲೀನ ಇತಿಹಾಸದ ಅಧ್ಯಯನಕ್ಕೆ ಹೊರಳಿದರು. ನಂತರ ವಚನಗಳನ್ನೂ ಅಧ್ಯಯನ ಮಾಡಿದರು. ಅಷ್ಟು ಮಾತ್ರವಲ್ಲದೆ, ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಮಧ್ಯಕಾಲೀನ ಕರ್ನಾಟಕದಲ್ಲಿ ಅಸ್ಪೃಶ್ಯತೆ ಹೇಗಿತ್ತು ಎಂಬುದರ ಕುರಿತ ಚಿದಾನಂದಮೂರ್ತಿಯವರು ಬರೆದ ಲೇಖನವೇ ಅವರ ಸಾಮಾಜಿಕ ಕಳಕಳಿಗೆಉತ್ತಮ ಉದಾಹರಣೆ’ ಎಂದುನಾಗಭೂಷಣ ಸ್ವಾಮಿ ತಿಳಿಸಿದರು.

ಮುಂದುವರೆದ ಅವರು ‘ಚಿದಾನಂದಮೂರ್ತಿತೆಗೆದುಕೊಂಡ ಕೆಲವು ಸಾರ್ವಜನಿಕ ಮತ್ತು ವೈಚಾರಿಕ ನಿಲುವುಗಳು ಇಷ್ಟ ಆಗದೇ ಇರಬಹುದು, ಆದರೆ ವ್ಯಕ್ತಿಯಾಗಿ ಸಂಶೋಧನೆಯಲ್ಲಿ ನಿಷ್ಠೆ ಇತ್ತು. ಇದನ್ನು ನೋಡಿದಾಗ ನನಗೆ ಎರಡು ಚಿತ್ರಗಳು ಮನಸ್ಸಿಗೆ ಬರುತ್ತವೆ. ಒಂದು ಅವರು ಭಾವುಕರಾಗುತ್ತಿದ್ದ ಪರಿ,ಇನ್ನೊಂದುನಂಬಿದ್ದನ್ನು ನೂರಕ್ಕೆ ನೂರಷ್ಟು ನಂಬುತ್ತಿದ್ದರು. ಅವರನ್ನು ಯಾರೂ ವಿಚಲಿತಗೊಳಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದರು.

‘ತಾತ್ವಿಕ ನಿಲುವು ಮತ್ತು ಸಂಶೋಧನೆಗಳು ಏನೇ ಇದ್ದರೂ ಅವರು ಮನುಷ್ಯರ ಜೊತೆ ಬಹಳ ಉತ್ತಮ ಸಂಬಂಧ ಹೊಂದಿದ್ದರು. ಮನುಷ್ಯರ ಬದುಕು ಬಹಳ ಮುಖ್ಯ ಎಂದು ತೋರಿಸಿಕೊಟ್ಟವರು. ಹಾಗೇ ವಸ್ತುನಿಷ್ಠವಾಗಿ ಆಕರಗಳನ್ನು ಇಟ್ಟುಕೊಂಡು ಸಂಶೋಧನೆ ಮಾಡುವ ಒಂದು ವಿಧಾನವನ್ನು ಕನ್ನಡಕ್ಕೆ ಪರಿಚಯ ಮಾಡಿಕೊಟ್ಟವರು. ವಿದ್ವಾಂಸರ ಹಿರಿಯ ತಲೆಮಾರು ಕಣ್ಮರೆಯಾಗುತ್ತಿದ್ದಂತೆ ವಿದ್ವತ್ತಿನ ಕ್ಷೇತ್ರದಲ್ಲಿಒಂದು ದೊಡ್ಡ ಶೂನ್ಯ ಉಳಿಯಿತು ಎಂದು ನನಗೆ ಅನಿಸುತ್ತದೆ’ಎಂದು ನಾಗಭೂಷಣ ಸ್ವಾಮಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT