ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿರೋಧಪಕ್ಷದ ನಾಯಕ ಆರ್‌. ಅಶೋಕ್‌ಗೆ ಸಿಗದ ಸರ್ಕಾರಿ ವಸತಿ ಗೃಹ: ಟೀಕೆ

ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌. ಅಶೋಕ ಅವರಿಗೆ ಇನ್ನೂ ಸರ್ಕಾರಿ ವಸತಿ ಗೃಹ ಹಂಚಿಕೆ ಮಾಡದೇ ಇರುವುದು ಟೀಕೆಗೆ ಕಾರಣವಾಗಿದೆ.
Published 11 ಜೂನ್ 2024, 10:51 IST
Last Updated 11 ಜೂನ್ 2024, 10:51 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌. ಅಶೋಕ ಅವರಿಗೆ ಇನ್ನೂ ಸರ್ಕಾರಿ ವಸತಿ ಗೃಹ ಹಂಚಿಕೆ ಮಾಡದೇ ಇರುವುದು ಟೀಕೆಗೆ ಕಾರಣವಾಗಿದೆ.

‘ಬಿಜೆಪಿ ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಿದ್ದು ತಡವಾಗಿ. ವಿರೋಧಪಕ್ಷದ ನಾಯಕ ಸ್ಥಾನಕ್ಕೆ ಅಶೋಕ ಆಯ್ಕೆ ಆದ ಬಳಿಕ ಸರ್ಕಾರಿ ನಿವಾಸ ಕೋರಿ ನಾಲ್ಕು ಪತ್ರಗಳನ್ನು ಬರೆದರೂ ಸರ್ಕಾರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ವಿರೋಧಪಕ್ಷದ ನಾಯಕರ ಕಚೇರಿ ಮೂಲಗಳು ಹೇಳಿವೆ.

‘ಅಶೋಕ ಅವರ ವಿಶೇಷ ಅಧಿಕಾರಿ ಈ ಸಂಬಂಧ ಮುಖ್ಯ ಕಾರ್ಯದರ್ಶಿಯವರನ್ನು ಎರಡು– ಮೂರು ಬಾರಿ ಭೇಟಿ ಮಾಡಿದ್ದರು. ಬೇಗನೆ ಕೊಡುತ್ತೇವೆ ಎಂದು ಹೇಳಿದರೂ ಇಲ್ಲಿಯವರಿಗೂ ಕೊಟ್ಟಿಲ್ಲ’ ಎಂದು ಮೂಲಗಳು ತಿಳಿಸಿವೆ.

ನಂ1, ಕುಮಾರಕೃಪಾ ಪೂರ್ವ, ನಂ 1 ರೇಸ್‌ವ್ಯೂ ಕಾಟೇಜ್‌, ರೇಸ್‌ಕೋರ್ಸ್‌ ರಸ್ತೆ, ನಂ 2, ರೇಸ್‌ ವ್ಯೂ ಕಾಟೇಜ್‌, ರೇಸ್‌ ಕೋರ್ಸ್‌ ರಸ್ತೆ ಈ ಮೂರರಲ್ಲಿ ಒಂದನ್ನು ಅಧಿಕೃತ ನಿವಾಸವಾಗಿ ಕೊಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಈ ಮೂರೂ ನಿವಾಸಗಳು ಖಾಲಿ ಇದ್ದು, ವಿಧಾನಸೌಧಕ್ಕೆ ಹತ್ತಿರದಲ್ಲೇ ಇರುವುದರಿಂದ ಮೂರರಲ್ಲಿ ಒಂದನ್ನು ಕೊಡುವಂತೆ ಅಶೋಕ ಕೋರಿದ್ದಾರೆ.

ಈ ಹಿಂದೆ ತಾವು ಸಚಿವರಾಗಿದ್ದಾಗ ತಮಗೆ ಹಂಚಿಕೆ ಆಗಿದ್ದ ರೇಸ್‌ವ್ಯೂ ಕಾಟೇಜ್‌ ನಿವಾಸ ಸಂಖ್ಯೆ–2 ನ್ನು ಅಂದಿನ ಸಭಾಧ್ಯಕ್ಷರಿಗೆ ಬಿಟ್ಟುಕೊಟ್ಟಿದ್ದಾಗಿ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT