ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗದೀಶ ಶೆಟ್ಟರ್ ಜೊತೆ ಕಾಂಗ್ರೆಸ್ ಪಕ್ಷ ಇರಲಿದೆ: ಡಿ.ಕೆ ಶಿವಕುಮಾರ್

ಹುಬ್ಬಳ್ಳಿಯ ಮಧುರಾ ಎಸ್ಟೇಟ್‌ನಲ್ಲಿರುವ ಪ್ರಕಲ್ಪ ನಿವಾಸದಲ್ಲಿ ಬುಧವಾರ ಶೆಟ್ಟರ್ ಜೊತೆ ಚರ್ಚಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
Published 31 ಮೇ 2023, 7:23 IST
Last Updated 31 ಮೇ 2023, 7:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಕಷ್ಟ ಕಾಲದಲ್ಲಿ ಜಗದೀಶ ಶೆಟ್ಟರ್ ಕಾಂಗ್ರೆಸ್ ಜೊತೆಯಿದ್ದು, ರಾಜ್ಯದಲ್ಲಿ ಸರ್ಕಾರ ಬರಲು ಕಾರಣರಾಗಿದ್ದಾರೆ. ಅವರ ಜೊತೆ ಕಾಂಗ್ರೆಸ್ ಪಕ್ಷ ಇರಲಿದೆ' ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಹುಬ್ಬಳ್ಳಿಯ ಮಧುರಾ ಎಸ್ಟೇಟ್‌ನಲ್ಲಿರುವ ಪ್ರಕಲ್ಪ ನಿವಾಸದಲ್ಲಿ ಬುಧವಾರ ಶೆಟ್ಟರ್ ಜೊತೆ ಚರ್ಚಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

'ಶೆಟ್ಟರ್, ಸವದಿ, ಪುಟ್ಟಣ್ಣ, ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ, ಬಾಬುರಾವ್ ಚಿಂಚನಸೂರು ಅವರು ಪಕ್ಷ ಸೇರ್ಪಡೆಯಾಗಿದ್ದರಿಂದ ನಮಗೆ ದೊಡ್ಡ ಶಕ್ತಿ ಬಂದಿದೆ. ಅವರು ಸಂಘಟನೆಯಲ್ಲಿ ತೊಡಗಿಕೊಂಡು ಜವಾಬ್ದಾರಿಯಿಂದ ಕೆಲಸ ಮಾಡಬೇಕು.‌ ಪಕ್ಷ ಅವರ ಜೊತೆ ಇದೆ ಎನ್ನುವ ಹೈಕಮಾಂಡ್ ಸಂದೇಶವನ್ನು ಶೆಟ್ಟರ್ ಅವರಿಗೆ ತಲುಪಿಸಿದ್ದೇನೆ' ಎಂದರು.

'ಹಿಂದಿನ ಸರ್ಕಾರದ ತಪ್ಪುಗಳನ್ನು, ಪ್ರತಿಯೊಂದು ಹಂತದಲ್ಲಿಯೂ ನಾವು ಖಂಡಿಸಿ ಜನರ ಎದುರು ಇಟ್ಟಿದ್ದೆವು. ನಾಡಿನ ಜನತೆ ಬದಲಾವಣೆ ಬದಲಿಸಿ, ನಮಗೆ ಅವಕಾಶ ನೀಡಿದೆ. ದೇವರು ವರನೂ ಕೊಡುವುದಿಲ್ಲ, ಶಾಪನೂ ಕೊಡುವುದಿಲ್ಲ; ಅವಕಾಶ ನೀಡುತ್ತಾನೆ. ಇದೀಗ ನಮಗೆ ಆ ಅವಕಾಶ ದೊರಕಿದ್ದು, ಸಮರ್ಥವಾಗಿ ಬಳಸಿಕೊಂಡು ಉತ್ತಮ ಆಡಳಿತ ನೀಡುತ್ತೇವೆ' ಎಂದರು.

‘ಸೂಕ್ತ ಸ್ಥಾನಮಾನದ ಭರವಸೆ’

‘ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ನನಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಜಗದೀಶ ಶೆಟ್ಟರ್ ಹೇಳಿದರು. ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಕಾಂಗ್ರೆಸ್‌ಗೆ ಯಾವ ರೀತಿ ಶಕ್ತಿ ತುಂಬಿದ್ದೇನೆ ಅನ್ನೋದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ಹೀಗಾಗಿ, ಯಾವ ರೀತಿ ನನ್ನ ಬಳಸಿಕೊಂಡರೆ ಪಕ್ಷಕ್ಕೆ ಪೂರಕ ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ’ ಎಂದರು.

‘ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಲಾಭವಾಗಿದೆ ಎಂದು‌ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಹೇಗೆ ಸಿದ್ಧತೆ ನಡೆಸಬೇಕು, ಎಷ್ಟು ಸ್ಥಾನಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಳ್ಳಬಹುದು ಹಾಗೂ ಪಕ್ಷ ಬಲವರ್ಧನೆಗೆ ಯಾವೆಲ್ಲ ಯೋಜನೆ ಹಾಕಿಕೊಳ್ಳಬಹುದು ಕುರಿತು ಚರ್ಚೆ ನಡೆಯಿತು. ಪರಸ್ಪರ ಸಲಹೆ, ಸೂಚನೆಗಳ ವಿನಿಮಯವಾಗಿವೆ. ಆ ಕುರಿತು ಬೆಂಗಳೂರಿನಲ್ಲಿ ಮುಖಂಡರ ಜೊತೆ ಸಭೆ ನಡೆಸಿ ಚರ್ಚಿಸುವ ಬಗ್ಗೆಯೂ ಡಿಕೆಶಿ ತಿಳಿಸಿದ್ದಾರೆ’ ಎಂದು ಹೇಳಿದರು.

‘ಲೋಕಸಭಾ ಚುನಾವಣೆಗೆ ನನ್ನನ್ನು ಅಭ್ಯರ್ಥಿಯನ್ನಾಗಿಸುವ ಕುರಿತು ಇಂದು ಯಾವುದೇ ಚರ್ಚೆ ನಡೆದಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಸಚಿವ ಸ್ಥಾನಕ್ಕೆ ನಾನು ಯಾವುದೇ ಬೇಡಿಕೆಯಿಟ್ಟಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT