ಬೆಂಗಳೂರು: ‘ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯವನ್ನು ಸಾಧ್ಯವಾಗಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಸಂಭಾವನೆ ನೀಡಲಾಗುತ್ತದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಈ ಸಂಬಂಧ ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ‘ಸರ್ಕಾರದ ಯೋಜನೆಗಳನ್ನು ರೈತರ ಮನೆಬಾಗಿಲಿಗೆ ತಲುಪಿಸಲು ಮತ್ತು ಪೌತಿ ಖಾತೆ ನೀಡುವ ಸೇವೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಆಧಾರ್ ಜೋಡಣೆಯ ಪಾತ್ರ ಮಹತ್ವದ್ದು. ಮನೆ–ಮನೆಗೆ ಭೇಟಿ ನೀಡಿ ಇದನ್ನು ಸಾಧ್ಯವಾಗಿಸಿದ್ದು, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು’ ಎಂದಿದ್ದಾರೆ.

‘ಈ ಕಾರ್ಯವನ್ನು ಸಾಧಿಸುವಲ್ಲಿ ಸಿಬ್ಬಂದಿಯು ತಮ್ಮ ವೈಯಕ್ತಿಕ ಹಣವನ್ನೂ ವೆಚ್ಚ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಹೀಗಾಗಿ ಪ್ರತಿ ಪಹಣಿ– ಆಧಾರ್ ಜೋಡಣೆಗೆ ₹1 ಸಂಭಾವನೆ ನೀಡಲು ನಿರ್ಧರಿಸಲಾಗಿದೆ. ಭೂ ಸುರಕ್ಷಾ ಯೋಜನೆ ಅಡಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಅನುದಾನದಲ್ಲಿ ₹4.4 ಕೋಟಿಯನ್ನು ಸಿಬ್ಬಂದಿಯ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.