ಬೆಂಗಳೂರು: ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆ ಅಡಿಯಲ್ಲಿ 2015ರಿಂದ 2024ರವರೆಗೆ 3.30 ಲಕ್ಷ ಬ್ಯಾಚ್ಗಳಲ್ಲಿ 1.30 ಕೋಟಿ ಜನರಿಗೆ ತರಬೇತಿ ನೀಡಲಾಗಿದೆ. ಆದರೆ, 2.30 ಲಕ್ಷ ಬ್ಯಾಚ್ಗಳಲ್ಲಿ ತರಬೇತಿ ನೀಡಿದವರು ಯಾರು ಎಂಬ ಮಾಹಿತಿಯೇ ಇಲ್ಲ. ಯೋಜನೆ ಅನುಷ್ಠಾನದಲ್ಲಿ ಹೆಜ್ಜೆಹೆಜ್ಜೆಗೂ ಅಕ್ರಮ ನಡೆದಿದೆ ಎಂದು ಮಹಾಲೇಖಪಾಲರು (ಸಿಎಜಿ) ಹೇಳಿದ್ದಾರೆ.

ಈಚೆಗೆ ಸಂಸತ್ತಿನಲ್ಲಿ ಮಂಡಿಸಲಾದ ‘ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಯೋಜನೆ–ಲೆಕ್ಕಪರಿಶೋಧನೆ’ ವರದಿಯಲ್ಲಿ ಈ ಉಲ್ಲೇಖ ಇದೆ.

‘ಯುವಜನರಲ್ಲಿ ಉದ್ಯೋಗಾರ್ಹತೆ ಹೆಚ್ಚಿಸುವ ಉದ್ದೇಶದ, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಇದು. 2015ರಿಂದ 2014ರವರೆಗೆ ಒಟ್ಟು ಮೂರು ಹಂತಗಳಲ್ಲಿ ₹10,194 ಕೋಟಿ ವೆಚ್ಚ ಮಾಡಲಾಗಿದೆ. ಸಾವಿರಾರು ತರಬೇತುದಾರರು 3.30 ಲಕ್ಷ ಬ್ಯಾಚ್ಗಳಲ್ಲಿ ತರಬೇತಿ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ವರದಿ ಹೇಳುತ್ತದೆ. ಆದರೆ ಈ ತರಬೇತುದಾರರು ಯಾರು ಎಂಬುದನ್ನು ವಿವರಿಸುವ ಸಂಪೂರ್ಣ ವಿವರ ಲಭ್ಯವಿಲ್ಲ’ ಎಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

‘2.30 ಲಕ್ಷ ಬ್ಯಾಚ್ಗಳಿಗೆ ತರಬೇತಿ ನೀಡಿದವರ ಹೆಸರು ಇರಬೇಕಾದ ಜಾಗದಲ್ಲಿ ಇಂಗ್ಲಿಷ್ನ ‘ನಲ್ (NULL)’, ‘0’, ‘0.00’ ಎಂದು ನಮೂದಿಸಲಾಗಿದೆ. ಕೆಲವೆಡೆ ‘ಅನ್ವಯವಾಗುವುದಿಲ್ಲ (ಎನ್ಎ)’ ಎಂದು ಉಲ್ಲೇಖಿಸಲಾಗಿದೆ. 3.30 ಲಕ್ಷ ಬ್ಯಾಚ್ಗಳಿಗೂ ಒಬ್ಬ ಮೇಲ್ವಿಚಾರಕರನ್ನು ಅನುಷ್ಠಾನ ಏಜೆನ್ಸಿಗಳು ನೇಮಕ ಮಾಡಿಕೊಳ್ಳಬೇಕು. ಮೇಲ್ವಿಚಾರಕರು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ (ಎನ್ಎಸ್ಡಿಸಿ) ಅಧಿಕಾರಿಗಳಿಗೆ ಉತ್ತರದಾಯಿಯಾಗಿರುತ್ತಾರೆ. ಆದರೆ 3.27 ಲಕ್ಷ ಬ್ಯಾಚ್ಗಳ ಮೇಲ್ವಿಚಾರಕರ ಹೆಸರಿನ ಮುಂದೆ ‘0’, ‘0.00’ ಎಂದು ಬರೆಯಲಾಗಿದೆ. ಇದು ಯೋಜನಾ ನಿಯಮದ ಉಲ್ಲಂಘನೆ’ ಎಂದು ಸಿಎಜಿ ಹೇಳಿದೆ.

‘ತರಬೇತುದಾರರಾಗಿ ಕಾರ್ಯನಿರ್ವಹಿಸಲು ಅರ್ಹತೆ ಪಡೆದವರನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಿಯಮ. ಆದರೆ ತರಬೇತುದಾರರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಯಾವುದೂ ಲಭ್ಯವಿಲ್ಲ. ಆ ವಿವರ ದಾಖಲಿಸುವ ಅಗತ್ಯವಿಲ್ಲ ಎಂದು ಕೌಶಲ್ಯಾಭಿವೃದ್ಧಿ ಸಚಿವಾಲಯ ಸಮಜಾಯಿಷಿ ನೀಡಿದೆ. ಆದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ತರಬೇತುದಾರರ ವಿವರ ಪಡೆದುಕೊಳ್ಳದೆ, ಅವರು ಅರ್ಹರು ಎಂಬುದನ್ನು ಹೇಗೆ ನಿರ್ಧರಿಸುತ್ತೀರಿ ಎಂಬ ಪ್ರಶ್ನೆಗೂ ಸಚಿವಾಲಯದ ಬಳಿ ಸಮರ್ಪಕ ಉತ್ತರವಿಲ್ಲ’ ಎಂದಿದೆ.

‘ಲೆಕ್ಕಪರಿಶೋಧನೆಯಲ್ಲಿ ಎತ್ತಲಾದ ಎಲ್ಲ ಅನುಮಾನ ಮತ್ತು ಪ್ರಶ್ನೆಗಳಿಗೆ ಕೌಶಲ್ಯಾಭಿವೃದ್ಧಿ ಸಚಿವಾಲಯವು, ‘ಡಿಬಿಟಿ ರೂಪದಲ್ಲಿ ಹಣ ಪಾವತಿ ಮಾಡಲಾಗಿದೆ. ಹಣ ಪಾವತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ’ ಎಂದು ಉತ್ತರ ನೀಡಿದೆ. ನಾವು ಕೇಳಿದ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಜತೆಗೆ ಸಂಬಂಧವೇ ಇಲ್ಲದ ಉತ್ತರವನ್ನು ಪದೇ–ಪದೇ ನೀಡಿದೆ. ಒಟ್ಟಾರೆಯಾಗಿ ತರಬೇತಿ ನಡೆದಿದೆ ಎಂಬುದನ್ನು ನಂಬಲು ಯಾವ ಸಾಕ್ಷ್ಯವೂ ಲಭ್ಯವಿಲ್ಲ’ ಎಂದು ಸಿಎಜಿ ಕಳವಳ ವ್ಯಕ್ತಪಡಿಸಿದೆ.

ಇಲ್ಲದ ಕಂಪನಿಗಳಿಂದ ತರಬೇತಿ

‘ನೀಲಿಮಾ ಮೂವಿಂಗ್ ಪಿಕ್ಚರ್ಸ್’ ಎಂಬ ಕಂಪನಿಯು 100 ನೌಕರರನ್ನು ಹೊಂದಿದ್ದು ಸಿನಿಮಾ ಕ್ಷೇತ್ರದಲ್ಲಿ 33493 ಮಂದಿಗೆ ತರಬೇತಿ ನೀಡಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವಾಲಯವು ಲೆಕ್ಕಪರಿಶೋಧನೆಗೆ ದಾಖಲೆ ಸಲ್ಲಿಸಿತ್ತು. ಈ ಹೆಸರಿನ ಕಂಪನಿಯು ದೇಶದ ಯಾವುದೇ ಭಾಗದಲ್ಲೂ ನೋಂದಣಿ ಆಗಿಲ್ಲ ಎಂಬುದು ಗೊತ್ತಾಯಿತು. ಆದರೆ ದೇಶದ ಎಂಟು ರಾಜ್ಯಗಳಲ್ಲಿ ಈ ಕಂಪನಿ ತರಬೇತಿ ನೀಡಿದೆ ಎಂದು ಹಣ ಪಾವತಿ ಮಾಡಲಾಗಿದೆ’ ಎಂದು ಸಿಎಜಿ ವಿವರಿಸಿದೆ. ‘ಈ ಬಗ್ಗೆ ವಿವರಣೆ ಕೇಳಿದ್ದಕ್ಕೆ ಕೌಶಲ್ಯಾಭಿವೃದ್ಧಿ ಸಚಿವಾಲಯವು ‘ನೀಲಿಮಾ ಮೂವಿಂಗ್ ಪಿಕ್ಚರ್ಸ್’ ಎಂಬ ಹೆಸರಿನ ಲಿಂಕ್ಡ್ಇನ್ ಖಾತೆಯ ಲಿಂಕ್ ನೀಡಿದೆ. ಲಿಂಕ್ಡ್ಇನ್ ಖಾತೆಯ ಆಧಾರದಲ್ಲಿ ತರಬೇತುದಾರರ ಕಂಪನಿಯನ್ನು ಆಯ್ಕೆ ಮಾಡಲಾಗಿದೆ. ಇದೇ ಕಂಪನಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸುವ ಸಮಾರಂಭದ ಒಂದೇ ಚಿತ್ರವನ್ನು ಹಲವು ಬ್ಯಾಚ್ಗಳದ್ದು ಎಂದು ಸುಳ್ಳು ಮಾಹಿತಿ ನೀಡಿದೆ’ ಎಂದಿದೆ. ‘114ಕ್ಕೂ ಹೆಚ್ಚು ಕಂಪನಿಗಳು ಈ ರೀತಿಯ ಅಕ್ರಮ ಎಸಗಿವೆ. ಒಂದೇ ಚಿತ್ರವನ್ನು ಬಳಸಿಕೊಂಡು ಮಹಾರಾಷ್ಟ್ರ ರಾಜಸ್ಥಾನ ಕೇರಳ ಒಡಿಶಾ ಉತ್ತರ ಪ್ರದೇಶ ಬಿಹಾರದಲ್ಲಿ ತರಬೇತಿ ಕಾರ್ಯಕ್ರಮ ನಡೆಸಿದ್ದೇವೆ ಎಂದು ದಾಖಲೆ ಅಪ್ಲೋಡ್ ಮಾಡಿವೆ. ಈ ಎಲ್ಲ ಅಕ್ರಮಗಳ ಬಗ್ಗೆ ವಿವರಣೆ ಕೇಳಿದರೆ ಸಚಿವಾಲಯವು ಹಾರಿಕೆಯ ಉತ್ತರ ನೀಡಿದೆ’ ಎಂದು ಸಿಎಜಿ ಕಟುವಾಗಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.