ಬೆಂಗಳೂರು: ಹಾಸನದಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ವಿತರಿಸಿದ್ದ ಪೌಷ್ಟಿಕ ಆಹಾರವು ಕಳಪೆ ಗುಣಮಟ್ಟದ್ದು ಎಂದು ವರದಿ ಬಂದಿದೆ. ಇದರ ಬೆನ್ನಲ್ಲೇ, ಎಲ್ಲ ಜಿಲ್ಲೆಗಳಲ್ಲೂ ವಿತರಿಸಲಾದ ಆಹಾರದ ಗುಣಮಟ್ಟ ಪರಿಶೀಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಲವು ಜಿಲ್ಲಾ ಉಪ ನಿರ್ದೇಶಕರು, ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

‘ಹಾಸನ ಜಿಲ್ಲೆಯ ಅಂಗನವಾಡಿಗಳಲ್ಲಿ ವಿತರಿಸಲಾಗಿದ್ದ ಹೆಸರು ಕಾಳು, ತೊಗರಿ ಬೇಳೆ, ಸಾಂಬಾರು ಪುಡಿ, ಪುಷ್ಟಿ ಸಿದ್ಧ ಆಹಾರ ಮತ್ತು ಸಿರಿಧಾನ್ಯದ ಉಂಡೆ ಕಳಪೆ ಗುಣಮಟ್ಟದವು ಎಂದು ದೂರುಗಳು ಬಂದಿದ್ದವು. ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು, ಹಾಸನ ಜಿಲ್ಲೆಯಲ್ಲಿ ವಿತರಿಸಲಾಗಿದ್ಧ ಪೌಷ್ಟಿಕ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಈ ಎಲ್ಲ ಮಾದರಿಯ ಆಹಾರ ಪದಾರ್ಥಗಳೂ ಕಳಪೆ ಗುಣಮಟ್ಟದ್ದು ಮತ್ತು ಬಳಸಲು ಯೋಗ್ಯವಲ್ಲ’ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಪ್ರಯೋಗಾಲಯವು ವರದಿ ನೀಡಿತ್ತು. ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾಗಿದ್ದ ಅರ್ಜಿಗೆ ಏಪ್ರಿಲ್ 16ರಂದು ಉತ್ತರ ನೀಡಿತ್ತು.

ಇದರ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಉಪ ನಿರ್ದೇಶಕರು ಮತ್ತು ಸೂಪರಿಂಟೆಂಡೆಂಟ್ ಇಲಾಖೆಯ ನಿರ್ದೇಶಕರಿಗೆ ಮೇ 27 ಮತ್ತು 28ರಂದು ಪತ್ರ ಬರೆದಿದ್ದಾರೆ.

‘ಗುತ್ತಿಗೆ ಪಡೆದಿರುವ ಸ್ವಸಹಾಯ ಸಂಘಗಳಿಂದ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದೆ. ಈ ಬಗ್ಗೆ ಹಲವು ದೂರುಗಳು ಬಂದಿವೆ. ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಹಾಳಾದ ಆಹಾರ ಪದಾರ್ಥಗಳನ್ನು ವಿತರಿಸಿರುವುದು ಗಮನಕ್ಕೆ ಬಂದಿತು. ಹೀಗಾಗಿ ಎಲ್ಲೆಡೆ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಬೇಕು’ ಎಂದು ಕೋರಿದ್ದಾರೆ.

‘ಮಹಿಳಾ ಸ್ವಸಹಾಯ ಗುಂಪುಗಳಿಗೆ ಆಹಾರ ಪೂರೈಕೆಯ ಗುತ್ತಿಗೆ ನೀಡಲಾಗಿದೆ. ಆದರೆ ಈ ಹಿಂದೆ ಕಳಪೆ ಗುಣಮಟ್ಟದ ಆಹಾರ ಪದಾರ್ಥ ಪೂರೈಸಿ ಕಪ್ಪುಪಟ್ಟಿ ಸೇರಿದ್ದ ಕಂಪನಿಯೇ, ಸ್ವಸಹಾಯ ಗುಂಪುಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುತ್ತಿದೆ. ಸ್ವಸಹಾಯ ಗುಂಪುಗಳು ಅದನ್ನು ಸಣ್ಣ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿ, ವಿತರಣೆಗೆ ಕಳುಹಿಸುತ್ತಿವೆ. ಈ ಬಗ್ಗೆ ವಿಸ್ತೃತ ತನಿಖೆಯ ಅಗತ್ಯವಿದೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಈ ಪತ್ರಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಇಲಾಖೆಯ ನಿರ್ದೇಶಕರ ಕಚೇರಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಲಿಲ್ಲ. ಇಲಾಖೆ ಉಪ ನಿರ್ದೇಶಕರೂ ಕರೆ ಸ್ವೀಕರಿಸಲಿಲ್ಲ.

‘ಎರಡನೇ ಪರೀಕ್ಷೆಯಲ್ಲಿ ಪಾಸು’

‘ಹಾಸನದಲ್ಲಿ ಸಂಗ್ರಹಿಸಲಾಗಿದ್ದ ಮಾದರಿಗಳು ಕಳಪೆ ಗುಣಮಟ್ಟದವು ಎಂದು ವರದಿ ಬಂದ ನಂತರ ಪೂರೈಕೆದಾರರಿಗೆ ನೋಟಿಸ್ ನೀಡಲಾಗಿತ್ತು. ಅವರು ಮತ್ತಷ್ಟು ಮಾದರಿಗಳನ್ನು ಕಳುಹಿಸಿ, ಪರೀಕ್ಷೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಎರಡನೇ ಪರೀಕ್ಷೆಯಲ್ಲಿ ಆಹಾರ ಪದಾರ್ಥಗಳು ಬಳಕೆಗೆ ಯೋಗ್ಯವಾಗಿವೆ ಎಂಬ ವರದಿ ಬಂತು. ಹೀಗಾಗಿ ಅವನ್ನೇ ವಿತರಿಸಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಾಹಿತಿ ಹಕ್ಕು ಕಾಯ್ದೆ ಅಡಿ ನೀಡಿದ ಉತ್ತರದಲ್ಲಿ ವಿವರಿಸಿದೆ.

ಈ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿರುವ ಅಧಿಕಾರಿಗಳು, ‘ಪೂರೈಕೆದಾರರು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಪರೀಕ್ಷೆಗೆ ಕಳುಹಿಸುತ್ತಾರೆ. ಅವು ಬಳಕೆಗೆ ಯೋಗ್ಯ ಎಂದು ವರದಿ ಬರುತ್ತದೆ. ಆನಂತರ ಕಡಿಮೆ ಬೆಲೆಯ, ಕಳಪೆ ಗುಣಮಟ್ಟದ ಪದಾರ್ಥ ಪೂರೈಸುತ್ತಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ನೋಟಿಸ್ ನೀಡಿದಾಗ ಪ್ರಯೋಗಾಲಯದ ವರದಿಯನ್ನು ತೋರಿಸುತ್ತಾರೆ. ಹೀಗಾಗಿ ರಾಜ್ಯದ ಎಲ್ಲೆಡೆ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

‘ಬಿಲ್ ಸಲ್ಲಿಕೆಯಾಗಿಲ್ಲ’

‘ಕಳಪೆ ಗುಣಮಟ್ಟದ್ದು ಎಂದು ವರದಿ ಬಂದ ನಂತರ ಪೂರೈಕೆದಾರರಿಗೆ ನೋಟಿಸ್ ನೀಡಿ, ದಂಡ ವಿಧಿಸಲಾಗಿತ್ತು. ಆ ಬ್ಯಾಚ್ನಲ್ಲಿ ಉಳಿದಿದ್ದ ಎಲ್ಲ ಪದಾರ್ಥ ಗಳನ್ನು ನಾಶ ಮಾಡಲಾಗಿದೆ. ಆ ಬ್ಯಾಚ್ನಲ್ಲಿ ಪೂರೈಸಲಾದ ಪದಾರ್ಥಗಳಿಗೆ ಬಿಲ್ ಸಲ್ಲಿಸಬೇಡಿ ಎಂದು ಸೂಚಿಸಿದ್ದೇವೆ. ಪೂರೈಕೆದಾರರೂ ಬಿಲ್ ಸಲ್ಲಿಸಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾಸನ ಜಿಲ್ಲಾ ಉಪ ನಿರ್ದೇಶಕ ಧರಣೇಶ್ ಕುಮಾರ್ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.