ಬೆಂಗಳೂರು: ‘ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾರಂಪರಿಕ ಕೊಲ್ಹಾಪುರಿ ಚಪ್ಪಲಿಗಳನ್ನು ತಮ್ಮದೆಂದು ಪ್ರದರ್ಶಿಸಿರುವ ಇಟಲಿಯ ‘ಪ್ರಾಡಾ’ ಕಂಪನಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ತಿಳಿಸಿದೆ.

‘ಕೊಲ್ಹಾಪುರಿ ಚಪ್ಪಲಿಗಳ ವಿನ್ಯಾಸಕ್ಕೆ ಕರ್ನಾಟಕದ ಲಿಡ್ಕರ್ ಮತ್ತು ಮಹಾರಾಷ್ಟ್ರದ ಲಿಡ್ಕಾಂ ಸಂಸ್ಥೆಗಳು ಜಂಟಿಯಾಗಿ ಭೌಗೋಳಿಕ ಗುರುತು (ಜಿಯಾಗ್ರಾಫಿಕಲ್ ಇಂಡಿಕೇಷನ್–ಜಿಐ) ನೋಂದಣಿ ಹೊಂದಿವೆ. ಈ ಚಪ್ಪಲಿಗಳು ಪ್ರಪಂಚದಾದ್ಯಂತ ‘ಕೊಲ್ಹಾಪುರಿ ಚಪ್ಪಲ್’ ಎಂದೇ ಖ್ಯಾತವಾಗಿವೆ’ ನಿಗಮವು ಬುಧವಾರ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

‘ಇಟಲಿಯ ಮಿಲಾನೋದಲ್ಲಿ ಈಚೆಗೆ ನಡೆದ ಫ್ಯಾಷನ್ ಷೋನಲ್ಲಿ, ಅಲ್ಲಿನ ಪ್ರಾಡಾ ಕಂಪನಿಯ ರೂಪದರ್ಶಿಗಳು ಕೊಲ್ಹಾಪುರಿ ಚಪ್ಪಲಿಗಳನ್ನು ಪ್ರದರ್ಶಿಸಿದ್ದಾರೆ. ಕಂಪನಿಯು ಇದನ್ನು ‘ಪುರುಷರ ಚರ್ಮದ ಚಪ್ಪಲಿ’ ಎಂದು ಕರೆದಿದೆ. ಜತೆಗೆ ಅವುಗಳಿಗೆ ₹1.20 ಲಕ್ಷ ಬೆಲೆ ನಿಗದಿ ಮಾಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಕೊಲ್ಹಾಪುರಿ ಚಪ್ಪಲಿಗಳನ್ನು ಹೆಸರಿಸದೇ, ಅವುಗಳ ವಿನ್ಯಾಸ ಕದಿಯಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ’ ಎಂದು ವಿವರಿಸಿದೆ.

‘ಕೊಲ್ಹಾಪುರಿ ಚಪ್ಪಲಿಗಳಿಗೆ ನಾವು 2018ರಲ್ಲೇ ಜಿಐ ನೋಂದಣಿ ಮಾಡಿಸಿದ್ದೇವೆ. ಅನುಮತಿ ಪಡೆಯದೇ ಆ ವಿನ್ಯಾಸವನ್ನು ಬಳಸಿಕೊಂಡಿರುವುದು ಜಿಐ ನಿಯಮಗಳ ಉಲ್ಲಂಘನೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗಿದೆ. ₹500 ಕೋಟಿ ಪರಿಹಾರ ಕೋರಿ ಪ್ರಾಡಾ ಕಂಪನಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು’ ಎಂದು ನಿಗಮವು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.