ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ಪ್ರಕರಣ | ಸಂತ್ರಸ್ತೆಯರಿಗೆ ಧೈರ್ಯ ತುಂಬಲಿಲ್ಲ ಏಕೆ? ಶಾಗೆ ಕಾಂಗ್ರೆಸ್‌

Published 1 ಮೇ 2024, 14:33 IST
Last Updated 1 ಮೇ 2024, 14:33 IST
ಅಕ್ಷರ ಗಾತ್ರ

ಬೆಂಗಳೂರು: ನಾರಿಶಕ್ತಿಯ ಬಗ್ಗೆ ಗೌರವ ಇರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತೆಯರನ್ನು ಭೇಟಿಯಾಗಿ ಧೈರ್ಯ ತುಂಬಲಿಲ್ಲ ಏಕೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ‍ಪೋಸ್ಟ್‌ ಹಂಚಿಕೊಂಡಿರುವ ಕಾಂಗ್ರೆಸ್‌, ಜಾಗತಿಕ ಮಟ್ಟದಲ್ಲಿ ಈ ಪ್ರಕರಣ ಸದ್ದು ಮಾಡಿದ್ದರೂ ದೇಶದ ಗೃಹಸಚಿವರಾಗಿ ಅಮಿತ್ ಶಾ ಅವರು ತಮ್ಮ ಹೊಣೆಗಾರಿಕೆ ಪ್ರದರ್ಶಿಸಿಲ್ಲವೇಕೆ? ಎಂದು ಕಿಡಿಕಾರಿದ್ದಾರೆ.

ಅಮಿತ್‌ ಶಾ ಅವರೇ ಹೇಳಿಕೊಂಡಂತೆ ಅವರಿಗೆ ನಾರಿ ಶಕ್ತಿ, ಮಾತೃ ಶಕ್ತಿಯ ಬಗ್ಗೆ ಬಹಳ ಗೌರವವಿದೆಯಂತೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತ ಮಹಿಳೆಯರು ತೀವ್ರ ಆತಂಕ, ನೋವಿನಲ್ಲಿದ್ದಾರೆ. ಕರ್ನಾಟಕದಲ್ಲಿಯೇ ಇರುವ ಅಮಿತ್‌ ಶಾ ಅವರು ಸಂತ್ರಸ್ತೆಯರನ್ನು ಮಹಿಳೆಯರು ಭೇಟಿಯಾಗಿ ಸಂತೈಸಿಲ್ಲ ಏಕೆ? ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜ್ವಲ್ ರೇವಣ್ಣನ ಪ್ರಕರಣದ ಬಗ್ಗೆ ಮೊದಲು ಮಾಹಿತಿ ಸಿಕ್ಕಿದ್ದೇ ಅಮಿತ್ ಶಾ ಅವರಿಗೆ, ಹೀಗಿದ್ದೂ ನಿಷ್ಕ್ರೀಯರಾಗಿ ಕುಳಿತು ಮಹಿಳೆಯರ ಮಾನ ಹರಾಜು ಆಗಲು ಅವಕಾಶ ನೀಡಿದ್ದಕ್ಕೆ ಸಂತ್ರಸ್ತರನ್ನು ಸಂತೈಸುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT