ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಾಶ್‌ ರೈನ ಟ್ವಿಟರ್‌, ಫೇಸ್‌ಬುಕ್‌ನ ಹಿಂದಿ ಲೋಗೊಗೆ ಜಾಲತಾಣಗಳಲ್ಲಿ ಅಸಮಾಧಾನ

Last Updated 6 ಫೆಬ್ರುವರಿ 2019, 9:39 IST
ಅಕ್ಷರ ಗಾತ್ರ

ಬೆಂಗಳೂರು: ನಟ ಪ್ರಕಾಶ್‌ ರೈ ತಮ್ಮ ಟ್ವಿಟರ್‌ ಮತ್ತು ಫೇಸ್‌ಬುಕ್‌ ಖಾತೆಯಲ್ಲಿನ ಪ್ರೊಫೈಲ್‌ ಲೋಗೊ ಹಾಗೂ ಬ್ಯಾನರ್‌ ಅನ್ನು ಹಿಂದಿಯಲ್ಲಿ ಬರೆದುಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಈಗಾಗಲೇ ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಪ್ರಕಾಶ್‌ ರೈ ಹೇಳಿಕೊಂಡಿದ್ದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿ ಪ್ರಚಾರ ಆರಂಭಿಸಿದ್ದಾರೆ.

ತಮ್ಮ ಹೆಸರಿನ ಮೊದಲ ಅಕ್ಷರವಾದ ’ಪ್ರ’ ಅನ್ನು ಹಿಂದಿಯಲ್ಲಿ ಹಾಕಿರುವುದು ಯಾಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಟ್ವಿಟರ್‌ ಖಾತೆಯ ಬ್ಯಾನರ್‌ನಲ್ಲೂ 'ಚಲೋ ಪಾರ್ಲಿಮೆಂಟ್‌' ಎಂದುಬರೆದಿರುವುದಕ್ಕೂಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಶ್ರೀಕಾಂತ್‌ ಶೇಷಗಿರಿ ಎಂಬುವರು ಪ್ರಕಾಶ್ ರೈ ಅವರೇ . ನೀವು ಚುನಾವಣೆಗೆ ನಿಲ್ಲುತ್ತ ಇರುವುದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ, ನಿಮ್ಮ ಲೋಗೊ ನೋಡಿದರೆ ಹಿಂದಿ ಭಾಷೆಯಲ್ಲಿದೆ,ಚಲೋ ಪಾರ್ಲಿಮೆಂಟ್ ಅಂತೇ! ಅದನ್ನು ಕನ್ನಡದಲ್ಲಿ ಹೇಳುವುದಕ್ಕೆ ಯಾಕೆ ಆಗುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ನೀವು ಎಲ್ಲಾ ಭಾಷೆಯವರು ಈ ಕ್ಷೇತ್ರದಲ್ಲಿ ಇದ್ದಾರೆ ಅಂತ ಎಲ್ಲ ಭಾಷೆಗಳಲ್ಲೂ ಭಾಷಣ ಮಾಡಬೇಡಿ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT