ಬೆಳಗಾವಿ (ಸುವರ್ಣ ವಿಧಾನಸೌಧ): ಕಳಪೆ ಗುಣಮಟ್ಟದ ಔಷಧಿಗಳನ್ನು ಖರೀದಿ ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ 2014–15, 2016–17, 2017–18, 2018–19ನೇ ಸಾಲಿನ ಸಿಎಜಿ ವರದಿಯಲ್ಲಿನ ವಿಷಯಗಳ ಬಗ್ಗೆ ಸಮಿತಿಯ ವರದಿಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

2014–15ರಿಂದ 2016–17ರ ಅವಧಿಯಲ್ಲಿ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯು 6,776 ಬ್ಯಾಚ್‌ಗಳ ಔಷಧ ಖರೀದಿಸಿತ್ತು. ಈ ಪೈಕಿ ₹1.23 ಕೋಟಿ ಮೌಲ್ಯದ 27 ಬ್ಯಾಚ್‌ಗಳ ಔಷಧ ಉತ್ತಮ ಗುಣಮಟ್ಟದ್ದು ಆಗಿರಲಿಲ್ಲ. ಅದೇ ಅವಧಿಯಲ್ಲಿ, ₹4.08 ಕೋಟಿ ಮೊತ್ತದ 77 ಬ್ಯಾಚ್‌ಗಳ ಔಷಧ ಉತ್ತಮ ಗುಣಮಟ್ಟದ್ದು ಆಗಿರಲಿಲ್ಲ ಎಂದು ರಾಜ್ಯ ಔಷಧ ನಿಯಂತ್ರಕರು ಹೇಳಿದ್ದರು. ಸೊಸೈಟಿ ಹಾಗೂ ಔಷಧ ನಿಯಂತ್ರಕರ ನಡುವೆ ಸಮನ್ವಯ ಕೊರತೆ ಇದೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಕಳಪೆ ಗುಣಮಟ್ಟದ ಔಷಧಗಳನ್ನು ಸರಬರಾಜು ಮಾಡಿದ ಸಂಸ್ಥೆಗಳಿಂದ ಪೂರ್ಣ ಮೊತ್ತವನ್ನು ಇಲ್ಲಿಯವರೆಗೆ ವಸೂಲಿ ಮಾಡಿಲ್ಲ. ಸರಬರಾಜುದಾರರ ಭದ್ರತಾ ಠೇವಣಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಂಡು ಸಮಿತಿಗೆ ವರದಿ ಸಲ್ಲಿಸಬೇಕು ಎಂದು ಸಮಿತಿ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.