ಪದವಿಪೂರ್ವ ಪಠ್ಯಕ್ರಮ ಬೋಧಿಸುವ ಆಯಾ ವಿಷಯಗಳ ಉಪನ್ಯಾಸಕರಿಂದ ಸಿದ್ಧಪಡಿಸಿರುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಳಸಿಕೊಂಡು 2024–25ನೇ ಸಾಲಿನ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಫಲಿತಾಂಶ ಉತ್ತಮಪಡಿಸಲು ಎಲ್ಲ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಕ್ರಮಕೈಗೊಳ್ಳಬೇಕು ಎಂದು ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸೂಚಿಸಿದ್ದಾರೆ.