ಪೋಲಿಯೊ ಲಸಿಕೆ ವಿತರಣೆಯಲ್ಲಿ ವಿಜಯನಗರ ಜಿಲ್ಲೆ ಅಗ್ರ ಸ್ಥಾನ ಪಡೆದುಕೊಂಡಿದೆ. ಅಲ್ಲಿ 1.33 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ನೀಡಲಾಗಿತ್ತು. 1.43 ಲಕ್ಷ ಮಕ್ಕಳಿಗೆ ಲಸಿಕೆ ಒದಗಿಸಲಾಗಿದ್ದು, ಶೇ 108 ಸಾಧನೆಯಾಗಿದೆ. ಮಂಡ್ಯ, ಚಿಕ್ಕಮಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯೂ ಶೇ 100 ಹಾಗೂ ಅದಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ. ಕೋಲಾರ ಕಡೆಯ ಸ್ಥಾನದಲ್ಲಿದ್ದು, ಅಲ್ಲಿ 1.61 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ನೀಡಲಾಗಿತ್ತು. ಆದರೆ, 1.43 ಲಕ್ಷ ಮಕ್ಕಳಿಗೆ ಲಸಿಕೆ ಒದಗಿಸಲಾಗಿದ್ದು, ಶೇ 92 ರಷ್ಟು ಗುರಿ ತಲುಪಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 10.61 ಲಕ್ಷ ಮಕ್ಕಳಿಗೆ (ಶೇ 95) ಪೋಲಿಯೊ ಹನಿ ಹಾಕಲಾಗಿದೆ.