ರಾಜಗೀರ್ (ಬಿಹಾರ): ಅಮೋಘ ಆಟವಾಡಿದ ಭಾರತ ತಂಡ, ಪುರುಷರ ಏಷ್ಯಾ ಕಪ್ ಹಾಕಿ ಟೂರ್ನಿಯ ಸೂಪರ್ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಚೀನಾ ತಂಡವನ್ನು 7–0 ಗೋಲುಗಳಿಂದ ಸದೆಬಡಿದು ಶನಿವಾರ ಫೈನಲ್ ತಲುಪಿತು.

ಭಾರತ ಆರಂಭದಿಂದ ಆಟದ ಮೇಲೆ ನಿಯಂತ್ರಣ ಸಾಧಿಸಿತು. ಶಿಲಾನಂದ ಲಾಕ್ರಾ (4ನೇ ನಿಮಿಷ), ದಿಲ್ಪ್ರೀತ್ ಸಿಂಗ್ (7ನೇ), ಮನದೀಪ್ ಸಿಂಗ್ (18ನೇ ನಿಮಿಷ), ರಾಜಕುಮಾರ್ ಪಾಲ್ (37ನೇ ನಿಮಿಷ), ಸುಖಜೀತ್ ಸಿಂಗ್ (39ನೇ ನಿಮಿಷ) ಮತ್ತು ಅಭಿಷೇಕ್ (46 ಮತ್ತು 50ನೇ ನಿಮಿಷ) ಗೋಲುಗಳನ್ನು ಗಳಿಸಿದರು.

ಭಾರತದ ಸತತವಾಗಿ ನಡೆಸುತ್ತಿದ್ದ ದಾಳಿಯನ್ನು ನಿಭಾಯಿಸಲಿಕ್ಕೇ ಚೀನಾ ತನ್ನ ಸಮಯ ವ್ಯಯಿಸಬೇಕಾಯಿತು. ಹೀಗಾಗಿ ಆತಿಥೇಯ ತಂಡದ ರಕ್ಷಣಾ ವಿಭಾಗಕ್ಕೆ ಹೆಚ್ಚಿನ ಪರೀಕ್ಷೆ ಎದುರಾಗಲಿಲ್ಲ. ವಿಶೇಷವೆಂದರೆ ಇಡೀ ಪಂದ್ಯದಲ್ಲಿ ಭಾರತ ಎದುರಾಳಿಗಳಿಗೆ ಒಂದೂ ಪೆನಾಲ್ಟಿ ಕಾರ್ನರ್ ಬಿಟ್ಟುಕೊಟ್ಟಿರಲಿಲ್ಲ.

ಭಾರತ ಸೂಪರ್ಫೋರ್ ಲೀಗ್ಪಟ್ಟಿಯಲ್ಲಿ ಏಳು ಪಾಯಿಂಟ್ಗಳೊಂದಿಗೆ ಅಗ್ರಸ್ಥಾನ ಗಳಿಸಿತು. ಹಾಲಿ ಚಾಂಪಿಯನ್ ಕೊರಿಯಾ ನಾಲ್ಕು ಪಾಯಿಂಟ್ಗಳೊಂದಿಗೆ ಎರಡನೇ ಸ್ಥಾನ ಪಡೆಯಿತು.

ಆತಿಥೇಯರು ಭಾನುವಾರ ನಡೆಯಲಿರುವ ಫೈನಲ್ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದ್ದಾರೆ. ಇಲ್ಲಿ ಗೆದ್ದು, ಮುಂದಿನ ವರ್ಷ ಬೆಲ್ಜಿಯಂ– ನೆದರ್ಲೆಂಡ್ಸ್ನಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿಗೆ ನೇರ ಟಿಕೆಟ್ ಪಡೆಯುವ ಗುರಿ ತಂಡದ ಎದುರು ಇದೆ.

ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಭಾನುವಾರ ನಡೆಯುವ ಮತ್ತೊಂದು ಪಂದ್ಯದಲ್ಲಿ ಮಲೇಷ್ಯಾ, ಚೀನಾ ತಂಡವನ್ನು ಎದುರಿಸಲಿದೆ.

ಕಜಾಕಸ್ತಾನಕ್ಕೆ ಏಳನೇ ಸ್ಥಾನ: ವಿಶ್ವ ಕ್ರಮಾಂಕದಲ್ಲಿ 88ನೇ ಸ್ಥಾನದಲ್ಲಿದ್ದು ಟೂರ್ನಿಯ ದುರ್ಬಲ ತಂಡವೆನಿಸಿದ ಕಜಾಕಸ್ತಾನ ತಂಡ ದಿನದ ಇನ್ನೊಂದು ಪಂದ್ಯದಲ್ಲಿ 41ನೇ ಕ್ರಮಾಂಕದ ಚೀನಾ ತೈಪೆ ತಂಡವನ್ನು 6–4 ಗೋಲುಗಳಿಂದ ಸೋಲಿಸಿ ಏಳನೇ ಸ್ಥಾನ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.