ಬೆಂಗಳೂರು: ಪದವಿಪೂರ್ವ ಅಥವಾ ಪದವಿಯ ಯಾವುದೇ ಹಂತದಲ್ಲಿ ಕಂಪ್ಯೂಟರ್ ವಿಜ್ಞಾನ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಬೆಂಗಳೂರು ಜಲಮಂಡಳಿ ಹೇಳಿದೆ. ಅಲ್ಲದೆ, ಅರ್ಹ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಿದೆ.

ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರೂ, ‘ಕಂಪ್ಯೂಟರ್ ಸಾಕ್ಷರತೆ’ ಕೋರ್ಸ್‌ನ ಪ್ರಮಾಣಪತ್ರ ಸಲ್ಲಿಸದವರಿಗೆ ಸಹಾಯಕ ಎಂಜಿನಿಯರ್ ಹುದ್ದೆ ನೀಡಲು ಸಾಧ್ಯವಿಲ್ಲ ಎಂದು ಜಲಮಂಡಳಿ ಹೇಳಿತ್ತು. ಪದವಿಯಲ್ಲಿ ಕಂಪ್ಯೂಟರ್ ಸೈನ್ಸ್ ಓದಿದ ಅನೇಕ ಅಭ್ಯರ್ಥಿಗಳು ಅವಕಾಶದಿಂದ ವಂಚಿತರಾಗಿದ್ದರು. ಈ ಕುರಿತು ‘ಬಿ.ಇ ಪದವೀಧರ ಎ.ಇ ಹುದ್ದೆಗೆ ಅನರ್ಹ’ ಶೀರ್ಷಿಕೆಯಡಿ ‘ಪ್ರಜಾವಾಣಿ‘ಯಲ್ಲಿ 2020ರ ಮಾರ್ಚ್ 3ರಂದು ವಿಶೇಷ ವರದಿ ಪ್ರಕಟವಾಗಿತ್ತು.

‘ಬಿಇಯಲ್ಲಿ ಮೊದಲ ರ‍್ಯಾಂಕ್ ಬಂದಿದ್ದರೂ, ನಾನು ಎಇ ಹುದ್ದೆಗೆ ಅರ್ಹವಾಗಿರಲಿಲ್ಲ. ಕೇವಲ ಕಂಪ್ಯೂಟರ್ ಸಾಕ್ಷರತೆ ಕೋರ್ಸ್‌ನ ಪ್ರಮಾಣಪತ್ರ ನೀಡದ ಕಾರಣಕ್ಕೆ ಅವಕಾಶ ನಿರಾಕರಿಸಿದ್ದರು. ಪ್ರಜಾವಾಣಿಯಲ್ಲಿ ಬಂದ ವರದಿಯ ಆಧಾರದ ಮೇಲೆ ಜಲಮಂಡಳಿಯನ್ನು ಪ್ರಶ್ನಿಸಿದ್ದವು. ಇದೇ ವರದಿ ಆಧರಿಸಿ, ನ್ಯಾಯಾಲಯದ ಮೊರೆ ಹೋಗಿದ್ದೆವು. ಈಗ ನಮಗೆ ನ್ಯಾಯ ಸಿಕ್ಕಿದೆ’ ಎಂದು ಅಭ್ಯರ್ಥಿಯೊಬ್ಬರು ಸಂತಸ ಹಂಚಿಕೊಂಡರು.

‘ಪಿಯು ಅಥವಾ ಪದವಿಯ ಯಾವುದೇ ಹಂತದಲ್ಲಿ ಕಂಪ್ಯೂಟರ್ ಸಾಕ್ಷರತೆ ಓದಿದ್ದರೂ ಹುದ್ದೆಗೆ ಅರ್ಹ ಎಂದು ಜಲಮಂಡಳಿ ಹೇಳಿದೆ. ಈಗ ದಾಖಲೆ ಪರಿಶೀಲನೆಗೆ ಆಹ್ವಾನಿಸಿದೆ’ ಎಂದು ಅವರು ತಿಳಿಸಿದರು.

15, 16ರಂದು ಪರಿಶೀಲನೆ:24.08.2018ರ ನೇರ ನೇಮಕಾತಿ ಅಧಿಸೂಚನೆಗೆ ಅನುಗುಣವಾಗಿ ವಿವಿಧ ವೃಂದದ ಒಟ್ಟು 30 ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಲಾಗಿದೆ. ಇದೇ 15 ಮತ್ತು 16ರಂದು ದಾಖಲೆಗಳ ಪರಿಶೀಲನೆ ನಡೆಯಲಿದೆ.

ಮಾಹಿತಿಗೆ, ಮಂಡಳಿಯ ಜಾಲತಾಣ www.bwssb.gov.in ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.