ಮೃಗಾಲಯದಲ್ಲಿ ವಾರಕ್ಕೊಮ್ಮೆ ಪ್ರಾಣಿ– ಪಕ್ಷಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕೃಷ್ಣಮೃಗಗಳಿಗೆ ಸೋಂಕು ತಗಲಿದಾಗ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಹೀಗಾಗಿ ಹೆಚ್ಚು ಅನಾಹುತವಾಗಿದೆ.
– ಕ್ರಾಂತಿಕುಮಾರ್, ಡಿಸಿಎಫ್ ಬೆಳಗಾವಿ
ದಾಳಿ ನಿರ್ಲಕ್ಷ್ಯ ವಿಷಪ್ರಾಷಣವಾಗಿದ್ದರೆ ನೇರ ಹೊಣೆ ಮಾಡಬಹುದು. ಆದರೆ ಇದು ರೋಗಕ್ಕೆ ಸಂಬಂಧಿಸಿದ ಘಟನೆ. ಪೂರ್ಣ ತನಿಖೆ ಮುಗಿದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ.
– ಅನೀಲ ಪನ್ವಾರ್, ಸದಸ್ಯ ಕಾರ್ಯದರ್ಶಿ, ಕರ್ನಾಟಕ ಮೃಗಾಲಯ ಪ್ರಾಧಿಕಾರ
ಮೃಗಾಲಯದ ಪ್ರಾಣಿಗಳ ಆವರಣದ ಸ್ವಚ್ಛತೆ ಆಹಾರ ನೀಡುವಿಕೆ ಪ್ರಾಣಿಗಳ ಆರೋಗ್ಯ ಲಸಿಕೆ ನೀಡುವಿಕೆ ಆಡಳಿತ ರಕ್ಷಣೆ ಕುರಿತು ಕಳೆದೆರಡು ವರ್ಷಗಳಲ್ಲಿ ಅಧಿಕಾರಿಗಳು ಎಷ್ಟು ಬಾರಿ ತಪಾಸಣೆ ನಡೆಸಿದ್ದಾರೆ ಎಂಬ ವಿವರಗಳನ್ನು ಬಹಿರಂಗಪಡಿಸಬೇಕು.