ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಶಿಕ್ಷಕರ ನೇಮಕ: ಸಚಿವ ಬಂಗಾರಪ್ಪ

Published : 25 ಸೆಪ್ಟೆಂಬರ್ 2024, 12:26 IST
Last Updated : 25 ಸೆಪ್ಟೆಂಬರ್ 2024, 12:26 IST
ಫಾಲೋ ಮಾಡಿ
Comments

ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಶೀಘ್ರದಲ್ಲೇ 5 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಅರಕೇರಾ (ಕೆ) ಮಕ್ಕಳ ಪೌಷ್ಟಿಕತೆ ವೃದ್ಧಿಸಲು ಹಮ್ಮಿಕೊಂಡ ಮೊಟ್ಟೆ ವಿತರಣೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲ್ಯಾಣ ಭಾಗದಲ್ಲಿ ಶೇ 80 ರಷ್ಟು ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುವುದು. ಮೂರನೇ ಶನಿವಾರ ಬ್ಯಾಗ್ ಇಲ್ಲದ ದಿನವನ್ನು ಮಾಡಿದ್ದು, ಡಿಡಿಪಿಐಯವರು ಅನುಷ್ಠಾನ ಮಾಡುತ್ತಾರಾ ಇಲ್ಲವಾ ಗಮನಿಸಬೇಕು ಎಂದು ಸೂಚಿಸಿದರು.

40 ದಿನದಲ್ಲಿ 40 ಸಾವಿರ ಮಕ್ಕಳು ಎಲ್ ಕೆ ಜಿಗೆ ದಾಖಲಾಗಿದ್ದಾರೆ. ಇದು ಸಾಧನೆಯಾಗಿದೆ ಎಂದರು.

ಮುಂದಿನ 10 ವರ್ಷಗಳಲ್ಲಿ ಯಾದಗಿರಿ ಜಿಲ್ಲೆಯೂ ಎಸ್ ಎಸ್ ಎಲ್ ಸಿ ಸೇರಿದಂತೆ ಶೈಕ್ಷಣಿಕ ಮಟ್ಟದಲ್ಲಿ ಮುಂದೆ ಬರುತ್ತದೆ. ಅಕ್ಷರ ಆವಿಷ್ಕಾರ ಯೋಜನೆಯಡಿ ಈ ಭಾಗದ ಶಾಸಕರು ಶೇ 25 ರಷ್ಟು ಅನುದಾನ ತೆಗೆದಿಸಿದ್ದಾರೆ. ಇದರಿಂದ ಬಹಳಷ್ಟು ಅನುಕೂಲವಾಗುತ್ತಿದೆ ಎಂದರು.

ರಾಜ್ಯದ 25 ಸಾವಿರ ಮಕ್ಕಳಿಗೆ ನೀಟ್ ಕೋಚಿಂಗ್ ನೀಡಲಾಗುತ್ತದೆ‌. ತಂದೆ ತಾಯಿ ಮಕ್ಕಳನ್ನು ಶಾಲೆಗೆ ಕಳುಹಿಸಿ. ಶಾಲೆಯಲ್ಲಿ ಮಕ್ಕಳು ಇಲ್ಲದಿದ್ದರೆ ಮುಚ್ಚಬೇಕಾಗುತ್ತದೆ‌. ಈ ಹಿಂದೆ ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಶಾಲೆಗೆ ಮಕ್ಕಳು ಬರಲು ₹1 ನೀಡುತ್ತಿದ್ದರು. ಅದರಂತೆ ನಮ್ಮ ಸರ್ಕಾರ ಮಕ್ಕಳಿಗೆ 6 ದಿನವೂ ಮೊಟ್ಟೆ ವಿತರಿಸಲಾಗುತ್ತದೆ. ಜೊತೆಗೆ ‌ಬಿಸಿಯೂಟ, ಸಮವಸ್ತ್ರ, ಶೂ, ಪಠ್ಯಪುಸ್ತಕ ನೀಡಲಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT