ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಚಿತ್ರಕಲಾ ಪರೀಕ್ಷೆಯ ಮೌಲ್ಯಮಾಪನ ನಡೆದ 20 ಗಂಟೆಯೊಳಗೆಯೇ ಫಲಿತಾಂಶ ಪ್ರಕಟಿಸಲಾಗಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ.

ನವೆಂಬರ್ 20ರಿಂದ 22ರವರೆಗೆ ಪರೀಕ್ಷೆ ನಡೆದಿತ್ತು. ಇದೇ 6ರಿಂದ 12ರವರೆಗೆ ದಾವಣಗೆರೆಯ ಎರಡು ಕೇಂದ್ರಗಳಲ್ಲಿಮೌಲ್ಯಮಾಪನ ನಡೆದಿತ್ತು.

‘ಇದೇ ಪ್ರಥಮ ಬಾರಿಗೆ ಆನ್‌ಲೈನ್ ಮಾರ್ಕ್ ಪೋರ್ಟಿಂಗ್ ಮೂಲಕ ನೇರವಾಗಿ ಮೌಲ್ಯಮಾಪನ ಕೇಂದ್ರದಿಂದ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಅಂಕಗಳನ್ನು ಮಂಡಳಿಯ ಸರ್ವರ್‌ಗೆ ಪಡೆಯಲಾಯಿತು. ಹೀಗಾಗಿ ಮೌಲ್ಯಮಾಪನ ನಡೆದ 20 ಗಂಟೆಯೊಳಗೆಯೇ ಫಲಿತಾಂಶ ಪ್ರಕಟಿಸುವುದು ಸಾಧ್ಯವಾಗಿದೆ. 36,799 ವಿದ್ಯಾರ್ಥಿಗಳ 2.20 ಲಕ್ಷ ಡಾಟಾಗಳನ್ನು ಪಡೆದು ಎಸ್ಸೆಸ್ಸೆಲ್ಸಿ ಲಾಗಿನ್‌ಗೆ ಒದಗಿಸಲಾಗಿದೆ. ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶ ರವಾನಿಸಲಾಗಿದೆ. ಯಾವುದೇ ಮ್ಯಾನ್ಯುವಲ್ ಫಲಿತಾಂಶ ಪಟ್ಟಿಯನ್ನು ಕೇಂದ್ರಗಳಿಗೆ ಒದಗಿಸುವುದಿಲ್ಲ’ ಎಂದು ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.