ಬೆಂಗಳೂರು: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ 230 ಕಿ.ಮೀ ರಸ್ತೆ, 585.83 ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ ₹222 ಕೋಟಿ ಬಿಡುಗಡೆ ಮಾಡಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಸೋಮವಾರ ನಡೆದ ಸಚಿವ ಸಂಪುಟದ ಇತರೆ ತೀರ್ಮಾನಗಳು ಹೀಗಿವೆ.

*ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 10 ಕ್ರಿಮಿನಲ್ ಮೊಕದ್ದಮೆಗಳು ವಾಪಸ್

*ಬಿಎಂಟಿಸಿಗೆ 20 ಎಲೆಕ್ಟ್ರಿಕ್ ಮಿನಿ ಬಸ್ ಖರೀದಿಸಲು ₹19.13 ಕೋಟಿ ನೆರವು

*ಬೆಂಗಳೂರು ಗಾಲ್ಫ್ ಸಂಸ್ಥೆಗೆ ಸ್ಯಾಂಕಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ 59.18 ಎಕರೆ ಜಾಗದ ಲೀಸ್ ಮುಂದುವರಿಕೆ.

*ಕಲ್ಯಾಣ ಕರ್ನಾಟಕ ಭಾಗದ ಐದು ವಸತಿ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ₹ 75 ಕೋಟಿ.

*ಕರ್ನಾಟಕ ಸಹಕಾರ ಸೇವೆ (ವೃಂದ ಮತ್ತು ನೇಮಕಾತಿ ನಿಯಮಗಳು 2023)ಕ್ಕೆ ಅನುಮೋದನೆ.

*ವಿದ್ಯುತ್ ಮಗ್ಗ ನೇಕಾರರು ಮತ್ತು ಮಗ್ಗ ಪೂರ್ವ ಘಟಕಗಳ ಕಾರ್ಮಿಕರಿಗೆ ವಾರ್ಷಿಕ ₹ 5,000 ನೆರವು ನೀಡಲು, ನೇಯ್ಗೆ ಉದ್ದೇಶಕ್ಕೆ ಸಹಕಾರಿ ಬ್ಯಾಂಕುಗಳು, ಸಂಘಗಳ ಮೂಲಕ ₹2 ಲಕ್ಷವರೆಗೆ ಶೂನ್ಯಬಡ್ಡಿಯಲ್ಲಿ ಸಾಲ ಒದಗಿಸುವ ಆದೇಶಕ್ಕೆ ಅನುಮೋದನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.