ಮಂಗಳೂರು: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಟ್ರಸ್ಟ್ ವತಿಯಿಂದ ನೀಡಲಾಗುವ ಈ ವರ್ಷದ ರಾಜ್ಯ ಪ್ರಶಸ್ತಿಗೆ ಹಿರಿಯ ನಟ ರಮೇಶ್ ಭಟ್, ಹಿರಿಯ ವೈದ್ಯ ಡಾ.ಬಿ.ಎಂ.ಹೆಗ್ಡೆ, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಸಹಿತ 9 ಮಂದಿ ಆಯ್ಕೆಯಾಗಿದ್ದಾರೆ.

ಹಿರಿಯ ನಟಿ ಕಮನೀಧರನ್ (ರಂಗಭೂಮಿ), ವೈ.ಕೆ. ಸಂಧ್ಯಾಶರ್ಮಾ (ಸಾಹಿತ್ಯ), ಹಿರಿಯ ಯಕ್ಷಗಾನ ಕಲಾವಿದ ದಾಸಪ್ಪ ರೈ (ಯಕ್ಷಗಾನ), ಕುದ್ರೋಳಿ ಗಣೇಶ್ (ಜಾದೂ), ಕಾಂತಾಡಿಗುತ್ತು ಹರೀಶ್ ಪೆರ್ಗಡೆ (ಸಮಾಜಸೇವೆ), ಲೇಖಕ ಹಾಗೂ ಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ (ಯುವ ಪ್ರಶಸ್ತಿ) ಇತರ ಪುರಸ್ಕೃತರು.

ಹಂಸಕಾವ್ಯ ರಾಷ್ಟ್ರೀಯ ಪುರಸ್ಕಾರವನ್ನು ಜ್ಯೋತಿ ಗುರುಪ್ರಸಾದ್ ಅವರ ‘ವರನಂದಿ ಪ್ರತಿಮೆ’ ಕವನಸಂಕಲನಕ್ಕೆ (₹ 15 ಸಾವಿರ ಬಹುಮಾನ) ಹಾಗೂ ಕಥಾಯಜ್ಞ ರಾಷ್ಟ್ರೀಯ ಪುರಸ್ಕಾರವನ್ನು ಪ್ರೊ.ಬಿ.ಆರ್. ಪೊಲೀಸ್ ಪಾಟೀಲ್ ಬನಹಟ್ಟಿ ಅವರ ‘ಬೂದಿ ಮತ್ತು ಕೆಂಡ’ ಕಥಾ ಸಂಕಲನಕ್ಕೆ (₹10 ಸಾವಿರ ಬಹುಮಾನ) ನೀಡಲಾಗುವುದು. ಮಾರ್ಚ್ 2ರಂದು ನಗರದ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಕಾ.ವಿ. ಕೃಷ್ಣದಾಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.