ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಗಲಾಟೆ, ಧರ್ಮೇಗೌಡ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ: ಸಲೀಂ ಅಹ್ಮದ್

ಧರ್ಮೇಗೌಡ ಆತ್ಮಹತ್ಯೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌
Last Updated 4 ಜನವರಿ 2021, 11:52 IST
ಅಕ್ಷರ ಗಾತ್ರ

ಮಂಗಳೂರು: ‘ವಿಧಾನ ಪರಿಷತ್‌ನಲ್ಲಿ ನಡೆದ ಘಟನೆ ಹಾಗೂ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣಕ್ಕೆ ಸರ್ಕಾರವೇ ನೇರ ಹೊಣೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಪಾದಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾನೂನು– ನಿಯಮಾವಳಿ ಉಲ್ಲಂಘಿಸಿ ಸಭಾಧ್ಯಕ್ಷರನ್ನು ಕೆಳಗಿಳಿಸುವ ತರಾತುರಿ ಸರ್ಕಾರಕ್ಕೆ ಏಕೆ ಬೇಕಿತ್ತು? ಉಪಸಭಾಪತಿಗಳಿಗೆಮಧ್ಯರಾತ್ರಿ ಕರೆ ಮಾಡಿ ಸಭಾಪತಿಗಳ ಪೀಠವನ್ನು ಅಲಂಕರಿಸುವಂತೆ ಹೇಳಿದ್ದು ಯಾಕೆ?’ ಎಂದು ಪ್ರಶ್ನಿಸಿದರು.

‘ಸಭಾಪತಿಗಳ ಅನುಮತಿ ಇಲ್ಲದೇ ಸದನಕ್ಕೂ ಯಾರೂ ಕಾಲಿಡುವುದಿಲ್ಲ. ಇದು ಸಂಸ್ಕೃತಿ. ಆದರೆ, ಅಂತಹ ಸಭಾಪತಿಗಳೇ ಬಾರದ ಹಾಗೆ ಬೀಗ ಹಾಕಿದ್ದು ಯಾಕೆ? ಖುದ್ದು ಉಪಮುಖ್ಯಮಂತ್ರಿ ಮತ್ತು ಕಾನೂನು ಸಚಿವರೇ ಕಾನೂನು ಉಲ್ಲಂಘಿಸಿದ್ದು ಖೇದಕರ’ ಎಂದು ವಿಷಾದಿಸಿದರು.

‘ಸದನದ ಘಟನೆಯಿಂದ ದೇಶದಲ್ಲೇ ತಲೆತಗ್ಗಿಸುವಂತಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾನು ಕಾಂಗ್ರೆಸ್‌ ಸದಸ್ಯರನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ಈ ಬೆಳವಣಿಗೆಗೆ ಸರ್ಕಾರವೇ ನೇರ ಹೊಣೆ’ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT