ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪು ಜಾರಿಗೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಪರಿಶಿಷ್ಟ ಸಮುದಾಯದ ಎಲ್ಲ ವರ್ಗಗಳ ಜನರಲ್ಲಿ ಸಹಮತ ಮೂಡಿಸಲು ಕಾಂಗ್ರೆಸ್ ಶಾಸಕ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ಪ್ರಮುಖರ ಸಭೆ ಮಂಗಳವಾರ ನಡೆಯಿತು.
ಶಾಸಕರ ಭವನದಲ್ಲಿ ನಡೆದ ಈ ಪೂರ್ವಭಾವಿ ಸಭೆಯಲ್ಲಿ, ಪರಿಶಿಷ್ಟ ಜಾತಿಯಲ್ಲಿರುವ ಎಲ್ಲ ಸಮುದಾಯಗಳನ್ನು ಒಂದೇ ಸೂರಿನಡಿ ತಂದು ಒಟ್ಟಾಭಿಪ್ರಾಯ ಮೂಡಿಸುವ ಕುರಿತು ಚರ್ಚೆ ನಡೆಯಿತು. ಪರಿಶಿಷ್ಟ ಸಮುದಾಯದಲ್ಲಿ ಒಗ್ಗಟ್ಟು ಪುನರ್ನಿರ್ಮಾಣದ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಆರಂಭ ಎಂದು ಸಭೆಯಲ್ಲಿ ಭಾಗವಹಿಸಿದ ಎಲ್ಲ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಎಚ್.ಪಿ. ಸುಧಾಮ್ ದಾಸ್, ದಲಿತ ಮುಖಂಡರಾದ ಬಿ. ಗೋಪಾಲ್, ಮಾವಳ್ಳಿ ಶಂಕರ್, ಬಸವರಾಜ್ ಕೌತಾಳ್, ಗಡ್ಡೆಮ್ ವೆಂಕಟೇಶ್, ಹೆಣ್ಣೂರ್ ಶ್ರೀನಿವಾಸ್ ಮತ್ತು ವಿವಿಧ ದಲಿತ ಸಮುದಾಯಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದರು.