ಮುಂದಿನ ಬಜೆಟ್‌ನಲ್ಲಿ ₹45790 ಕೋಟಿ ಹಂಚಿಕೆಗೆ ಪ್ರಸ್ತಾವ
‘ಎಸ್‌ಸಿಎಸ್‌ಪಿ ಟಿಎಸ್‌ಪಿ ಕಾಯ್ದೆ 2013’ರ ಅಡಿ ಒದಗಿಸುವ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೇರವಾಗಿ ಪ್ರಯೋಜನ ಆಗುವ ಕಾರ್ಯಕ್ರಮಗಳಿಗೆ ಮಾತ್ರ ಹಂಚಿಕೆ ಮಾಡಬೇಕಿದೆ. ಅದರಂತೆ ಫಲಾನುಭವಿಗಳ ನಿಖರ ಸಂಖ್ಯೆಗೆ ಅನುಗುಣವಾಗಿ ಎಲ್ಲ ಇಲಾಖೆಗಳು ಎಲ್ಲ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲು ಕರಡು ಎಸ್‌ಸಿಎಸ್‌ಪಿ ಟಿಎಸ್‌ಪಿ ಆಯವ್ಯಯ ಸಿದ್ಧಪಡಿಸಬೇಕಿದೆ. 2024–25ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು ₹1.60 ಲಕ್ಷ ಕೋಟಿಯನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿತ್ತು. ಆ ಮೊತ್ತದಲ್ಲಿ ಶೇ 24.10ರಷ್ಟು ಅನುದಾನವನ್ನು ಪರಿಶಿಷ್ಟರ ಕಲ್ಯಾಣ ಯೋಜನೆಗಳಿಗೆ ಒದಗಿಸಲಾಗಿದೆ. 2025–26ನೇ ಸಾಲಿನ ಬಜೆಟ್‌ನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ₹1.90 ಲಕ್ಷ ಕೋಟಿ ಅನುದಾನ ಅಂದಾಜಿಸಲಾಗಿದ್ದು ಅದರಲ್ಲಿ ಶೇ 24.10ರಂತೆ ಎಸ್‌ಸಿಎಸ್‌ಪಿ ₹32585 ಕೋಟಿ ಮತ್ತು ಟಿಎಸ್‌ಪಿ ₹13205 ಕೋಟಿ ಸೇರಿ ಒಟ್ಟು ₹45790 ಕೋಟಿ ಹಂಚಿಕೆ ಮಾಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾಪ ಮಂಡಿಸಲು ನೋಡಲ್ ಏಜೆನ್ಸಿಗಳ ಸಭೆಯು ಶಿಫಾರಸು ಮಾಡಿದೆ.