ಬೆಂಗಳೂರು: ‘ಮದರಸಾದಲ್ಲಿ ಕಲಿಯುತ್ತಿದ್ದ 11 ವರ್ಷದ ಬಾಲಕನ ಮೇಲೆ ಅದೇ ಮದರಸಾದ ಇಬ್ಬರು ಶಿಕ್ಷಕರು ಸರಿ ರಾತ್ರಿಯಲ್ಲಿ ಅನೇಕ ಬಾರಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮದರಸಾದ ಸಂಸ್ಥಾಪಕ ಟ್ರಸ್ಟಿಯ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

‘ನನ್ನ ವಿರುದ್ಧದ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ನಗರದ ಪೈಜಾನ್ ಮಾಣಿಕ್ ಮಸ್ತಾನ್ ಮದರಸಾದ ಟ್ರಸ್ಟಿ ಮೊಹಮದ್ ಅಮೀರ್ ರಾಜ (33) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

‘ಈ ಪ್ರಕರಣದಲ್ಲಿ ಶಿಕ್ಷಕರು ವಿದ್ಯಾರ್ಥಿಯ ಮೇಲೆ ನಡೆಸಿರುವ ದೌರ್ಜನ್ಯ ಆಘಾತಕಾರಿಯಾಗಿದೆ. ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಕಾಯ್ದೆ ವ್ಯಾಪ್ತಿಗೆ ಒಳಪಡುವ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಸಮಾಜ ತತ್ತರಿಸುತ್ತದೆ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

‘ಎಷ್ಟೋ ಬಾರಿ ಈ ರೀತಿಯ ಘೋರ ಅಪರಾಧ ಕೃತ್ಯಗಳು ಮಾಹಿತಿಯ ಕೊರತೆಯಿಂದ ಮುಚ್ಚಿ ಹೋಗುತ್ತವೆ. ಅಂತೆಯೇ, ಕಿರುಕುಳಕ್ಕೆ ಒಳಗಾದ ಸಂತ್ರಸ್ತರೂ ದೂರು ದಾಖಲಿಸಲು ಮುಂದಾಗುವುದಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ಟ್ರಸ್ಟಿ ಅಪರಾಧ ಕೃತ್ಯದ ಬಗ್ಗೆ ತಮಗೆ ಮಾಹಿತಿ ದೊರೆತ ತಕ್ಷಣ ದೂರು ದಾಖಲಿಸದೆ ಇರುವುದು ಒಪ್ಪತಕ್ಕದ್ದಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಅರ್ಜಿದಾರ ಮೊಹಮದ್ ಅಮೀರ್ ರಾಜ ಮದರಸಾದ ಸಂಸ್ಥಾಪಕ ಟ್ರಸ್ಟಿ. ಮದರಸಾದ ಒಳಗೆ ಏನು ನಡೆಯುತ್ತಿದೆ ಎಂಬ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದವರು. ವಿಷಯ ಅರಿವಿಗೆ ಬಂದ ಮೇಲೂ ಅವರು ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗಿಲ್ಲ. ಇದೇ ಕಾರಣದಿಂದ ಆರೋಪಿತ ಶಿಕ್ಷಕರು ಸಂತ್ರಸ್ತ ಬಾಲಕನಿಗೆ ಪದೇ ಪದೇ ಕಿರುಕುಳ ನೀಡಿದ್ದಾರೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು’ ಎಂದು ರಾಜ್ಯ ಪ್ರಾಸಿಕ್ಯೂಷನ್ ವಕೀಲ ಹರೀಶ್ ಗಣಪತಿ ಮಂಡಿಸಿದ್ದ ವಾದವನ್ನು ನ್ಯಾಯಪೀಠ ಮಾನ್ಯ ಮಾಡಿದೆ.

ಪ್ರಕರಣವೇನು?: ‘ನನ್ನ 11 ವರ್ಷದ ಮಗ ನಗರದ ಪೈಜಾನ್ ಮಾಣಿಕ್ ಮಸ್ತಾನ್ ಮದರಸಾದಲ್ಲಿ ಕಲಿಯುತ್ತಿದ್ದ. ಅಲ್ಲೇ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದ. ಏಕಾಏಕಿ ಇವನು ಮದರಾಸದಲ್ಲಿ ಓದಲು ಇಷ್ಟವಿಲ್ಲ ಎಂದು ಅಲ್ಲಿಂದ ಓಡಿ ಬಂದಿದ್ದ. ಇವನಿಗೆ ಕಲಿಯಲು ಇಷ್ಟವಿಲ್ಲ ಎಂಬ ಕಾರಣಕ್ಕೆ ಸುಳ್ಳು ಹೇಳುತ್ತಿರಬಹುದು ಎಂದು ನಾನು ಮತ್ತು ನನ್ನ ಹೆಂಡತಿ ಭಾವಿಸಿದ್ದೆವು. ನಂತರ ಕೂಲಂಕಷವಾಗಿ ವಿಚಾರಿಸಿದಾಗ ಇವನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ನಮಗೆ ಗೊತ್ತಾಗಿದೆ’ ಎಂದು ಮಗುವಿನ ತಂದೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.