ಬೆಂಗಳೂರು: ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ‘ಶಕ್ತಿ’ ಯೋಜನೆ ಜಾರಿಯಾಗಿ ಒಂದೂವರೆ ತಿಂಗಳು ಕಳೆದಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಕ್ತಿ ಯೋಜನೆ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಶಕ್ತಿ ಯೋಜನೆಯಿಂದಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿದೆ. ದೇವಾಲಯಗಳ ಆದಾಯ ಹೆಚ್ಚಾಗಿದೆ, ಜನರ ಭಕ್ತಿಗೆ ಪುಷ್ಠಿ ಸಿಕ್ಕಿದೆ ಎಂದು ಕೊಂಡಾಡಿದೆ.
ಆರ್ಥಿಕತೆಯ ಚಲನಶೀಲತೆಯ ಬಗ್ಗೆ ಅರಿವಿಲ್ಲದ ಬಿಜೆಪಿಗರು ನಡೆಸಿದ ‘ಪಾಕಿಸ್ತಾನ, ಶ್ರೀಲಂಕಾ’ ಎಂಬ ಅಪಪ್ರಚಾರಕ್ಕೆ ಉತ್ತರವೂ ಸಿಕ್ಕಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
‘ಎಷ್ಟೋ ದಿನಗಳಿಂದ ತಮ್ಮ ನೆಚ್ಚಿನ ದೇವಾಲಯಗಳ ಭೇಟಿಗೆ ಕಾಯುತ್ತಿದ್ದ ಜನರು ಶಕ್ತಿ ಯೋಜನೆಯ ಲಾಭ ಪಡೆದು ದೇವರ ದರ್ಶನ ಪಡೆಯುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳುವಂತೆ ನಮ್ಮ ಸರ್ಕಾರಕ್ಕೆ ಜನತೆ ಹರಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಹೇಳಿದೆ.
ಜನರ ಧಾರ್ಮಿಕ ನಂಬಿಕೆಗಳಿಗೆ ಉತ್ತೇಜಿಸಿದ ಸಾರ್ಥಕತೆ ನಮಗಿದೆ, ಆದರೆ ಸೋಕಾಲ್ಡ್ ಧರ್ಮ ರಕ್ಷಕರಾದ ಬಿಜೆಪಿಗರು ಮಾಡಿದ್ದೇನು ಎನ್ನುವುದನ್ನು ಉತ್ತರಿಸಬಲ್ಲರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದ್ದಾರೆ.
ಓದಿ... ದೇಶದಲ್ಲಿ ಕೆಟ್ಟ ವಿಷಯಕ್ಕಿಂತ 40 ಪಟ್ಟು ಹೆಚ್ಚು ಒಳ್ಳೆಯ ವಿಷಯಗಳ ಚರ್ಚೆ: ಮೋಹನ್ ಭಾಗವತ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.