ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿಯ ಬದುಕು ಕಟ್ಟಿಕೊಂಡ ಮಹಿಳೆಯರ ಕತೆ ಸ್ಫೂರ್ತಿದಾಯಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ 'ಪ್ರಜಾವಾಣಿ'ಯ ವರದಿಯನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ ಅವರು, 'ಒಡಲ ಧ್ವನಿಯೆಂಬ ಮಹಿಳಾ ಸಂಘ ಕಟ್ಟಿಕೊಂಡು, ದೂರದ ವಿಜಯಪುರದ ಇಂಡಿಯಲ್ಲಿ ಹೋಳಿಗೆ ತಯಾರಿಸಿ ಶಕ್ತಿ ಯೋಜನೆಯಡಿ ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಿ ಬೆಂಗಳೂರಿಗೆ ತಂದು ವ್ಯಾಪಾರ ಮಾಡಿ, ಕೈತುಂಬ ಆದಾಯ - ನೆಮ್ಮದಿಯ ಬದುಕು ಕಟ್ಟಿಕೊಂಡ ಈ ಮಹಿಳೆಯರ ಕತೆ ಸ್ಫೂರ್ತಿದಾಯಕವಾಗಿದೆ' ಎಂದು ಬರೆದುಕೊಂಡಿದ್ದಾರೆ.

'ಹೆಂಡತಿ ದೇವಸ್ಥಾನಕ್ಕೆ ಹೋದವಳು ತಿಂಗಳಾದರೂ ಬರಲಿಲ್ಲ, ಶಕ್ತಿ ಯೋಜನೆ ಬಂದ್ಮೇಲೆ ಹೆಂಗಸರು ಮನೆಯಲ್ಲೇ ಇರಲ್ಲ ಎಂಬಿತ್ಯಾದಿ ಹೊಟ್ಟೆತುಂಬಿದ ಮಂದಿಯ ವ್ಯವಸ್ಥಿತ ಅಪಪ್ರಚಾರಗಳ ಬದಲು ಇಂತಹ ಸುದ್ದಿಗಳು ಹೆಚ್ಚು ಜನರನ್ನು ತಲುಪಬೇಕು. ಆ ಮೂಲಕ ಮತ್ತಷ್ಟು ಮಹಿಳೆಯರು ಬದುಕಿನ ಹೊಸಹಾದಿ ಕಂಡುಕೊಳ್ಳುವಂತಾಗಬೇಕು. ಆಗಲೇ ಯೋಜನೆಯ ಉದ್ದೇಶ ಪೂರ್ಣ ಸಾಕಾರಗೊಳ್ಳಲಿದೆ' ಎಂದೂ ಸಿಎಂ ಹೇಳಿದ್ದಾರೆ.

'ಶಕ್ತಿ ಯೋಜನೆ: ಬದುಕು ಕೊಟ್ಟ ಹೋಳಿಗೆ' ಎಂಬ ಶೀರ್ಷಿಕೆಯಡಿ 'ಪ್ರಜಾವಾಣಿ' ಮಾರ್ಚ್ 29ರಂದು ಸುದ್ದಿ ಪ್ರಕಟಿಸಿತ್ತು.
.ಶಕ್ತಿ ಯೋಜನೆ: ಬದುಕು ಕೊಟ್ಟ ಹೋಳಿಗೆ; ಇಂಡಿಯಿಂದ ಬೆಂಗಳೂರಿಗೆ ತೆರಳಿ ಮಾರಾಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.