ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಶ್‌ ನೀಚ ಶಿಕ್ಷಣ ಸಚಿವ: ಸಿದ್ದರಾಮಯ್ಯ ವಾಗ್ದಾಳಿ

ಪಠ್ಯದಲ್ಲಿ ಆರ್‌ಎಸ್‌ಎಸ್‌ ಸಿದ್ಧಾಂತ ತುರುಕಿ ಅಪಚಾರ
Published 1 ಮೇ 2023, 22:03 IST
Last Updated 1 ಮೇ 2023, 22:03 IST
ಅಕ್ಷರ ಗಾತ್ರ

ತಿಪಟೂರು: ರಾಜ್ಯದ ಸಾರ್ವಜನಿಕ ಶಿಕ್ಷಣ ಪಠ್ಯಪುಸ್ತಕದಲ್ಲಿ ಬಸವಣ್ಣ, ಕುವೆಂಪು, ಕೆಂಪೇಗೌಡ, ನಾರಾಯಣಗುರು, ಡಾ.ಬಿ.ಆರ್.ಅಂಬೇಡ್ಕರ್‌ ಅವರಂತಹ ಮಹನೀಯರ ಚರಿತ್ರೆ, ಇತಿಹಾಸ ತಿರುಚಿದ ನೀಚ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. 

ತಿಪಟೂರಿನಲ್ಲಿ ಭಾನುವಾರ ರಾತ್ರಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದರು.

’ಎನ್‍ಎಸ್‍ಯುಐ ವಿದ್ಯಾರ್ಥಿಗಳು ಮನೆ ಬಳಿಗೆ ಬಂದು ಪ್ರತಿಭಟನೆ ಮಾಡಿದ್ದಕ್ಕೆ ಸುಳ್ಳು ದೂರು ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಎನ್‍ಎಸ್‍ಯುಐ ವಿದ್ಯಾರ್ಥಿಗಳು ಆರ್.ಎಸ್.ಎಸ್ ಚಡ್ಡಿ ಸುಟ್ಟಿದ್ದಾರೆ. ಆದರೆ, ಇವರ ಚಡ್ಡಿ ಏನಾದರೂ ಸುಟ್ಟರೇ ನನಗೆ ಗೊತ್ತಿಲ್ಲ’ ಎಂದು ವೈಯಕ್ತಿಕ ವಾಗ್ದಾಳಿ ನಡೆಸಿದರು.

’ಬಿ.ಸಿ.ನಾಗೇಶ್ ಆರ್.ಎಸ್.ಎಸ್. ವ್ಯಕ್ತಿ. ಇತಿಹಾಸ ತಿರುಚುವುದು, ಸಮಾಜ ಒಡೆಯುವುದು, ಧರ್ಮ-ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಸಚಿವರಾಗಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಮಕ್ಕಳಿಗೆ ನೈಜ ಚರಿತ್ರೆ ತಿಳಿಸಬೇಕು. ಆದರೆ, ಆರ್.ಎಸ್.ಎಸ್ ಸಿದ್ಧಾಂತ ಅಳವಡಿಸಲು ಮುಂದಾಗಿದ್ದಾರೆ‘ ಎಂದು ಟೀಕಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT