ಮಾಗಡಿ: ವಿಷಜಂತು ಕಚ್ಚಿದ್ದರಿಂದ ಶಾಸಕ ಎ.ಮಂಜುನಾಥ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶುಕ್ರವಾರ ಸಂಜೆ ಅವರು ತಾಲ್ಲೂಕಿನ ಹಾಲಸಿಂಗನ ಹಳ್ಳಿಯಲ್ಲಿ ಸೋಲಾರ್ ಬೀದಿ ದೀಪ ಉದ್ಘಾಟಿಸಿದ್ದರು. ನಂತರ ದಿಬ್ಬದ ಮೇಲೆ ನಿಂತಿದ್ದ ಮಹಿಳೆಯರು ಅವರೊಂದಿಗೆ ಮಾತನಾಡಿ, ವಿವಿಧ ಸರ್ಕಾರಿ ಸವಲತ್ತು ಕೊಡಿಸುವಂತೆ ಮನವಿ ಮಾಡಿದರು. ಆಗ ವಿಷಜಂತು ಶಾಸಕರ ಕಾಲಿನ ಉಗುರಿನ ಕೆಳಗೆ ಕಚ್ಚಿರಬೇಕೆಂದು ಅಂದಾಜು ಮಾಡಲಾಗಿದೆ.

ಅಲ್ಲಿಂದ ಹೂಜುಗಲ್ಲಿಗೆ ತೆರಳಿ ಕಾರ್ಯಕ್ರಮ ಮುಗಿಸುವ ವೇಳೆ ಉರಿ ಕಾಣಿಸಿಕೊಂಡಿತ್ತು. ಕೂಡಲೇ ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಜಂತು ಯಾವುದು ಎಂಬುದನ್ನು ಖಚಿತಪಟ್ಟಿಲ್ಲ. ಹಾವು, ಅಥವಾ ವಿಷಜಂತು ಕಚ್ಚಿದೆಯೇ ಎಂಬ ಬಗ್ಗೆ ಮಾಹಿತಿ ತಿಳಿದಿಲ್ಲ. ‘ಜನತೆ ಆತಂಕ ಪಡುವ ಅಗತ್ಯವಿಲ್ಲ. ಶಾಸಕರು ಆರೋಗ್ಯವಾಗಿದ್ದಾರೆ’ ಎಂದು ಶಾಸಕರ ಆಪ್ತಕಾರ್ಯದರ್ಶಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.