ಬೆಂಗಳೂರು: ಕೋವಿಡ್ ಸಮಯದಲ್ಲಿ ಅನುಷ್ಠಾನಗೊಳಿಸಿದ ಉಪಕ್ರಮಗಳಿಗಾಗಿ ಕೆಎಸ್‌ಆರ್‌ಟಿಸಿಗೆ ರೋಟರಿ 3190 ಡಿಸ್ಟ್ರಿಕ್ಟ್‌ನ ಸಾಮಾಜಿಕ ಕಳಕಳಿ ಪ್ರಶಸ್ತಿ ಲಭಿಸಿದೆ.

ಹಳೆಯ ಬಸ್‌ಗಳನ್ನು ಬಳಸಿಕೊಂಡು 20 ಕಡೆ ಸಂಚಾರಿ ಜ್ವರ ಕ್ಲಿನಿಕ್ ತೆರೆಯಲಾಗಿತ್ತು. ಮಿನಿ ಬಸ್‌ಗಳನ್ನು ಸಾರಿಗೆ ಸಂಜೀವಿನಿ ಆಂಬುಲೆನ್ಸ್ ಆಗಿ ಪರಿವರ್ತಿಸಲಾಗಿತ್ತು. ಬಸವೇಶ್ವರ ನಗರದ ಬಸ್ ನಿಲ್ದಾಣದಲ್ಲಿ ರೋಟರಿ ಆಡ್ವಿಕಾ ನಯೋನಿಕಾ ಸಹಯೋಗದಲ್ಲಿ 200 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿತ್ತು.

ಕ್ಯಾನ್ಸರ್ ಬಗ್ಗೆ ಹಳ್ಳಿ–ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು ಮತ್ತು ಸಂಚಾರಿ ರಕ್ತ ನಿಧಿಯಾಗಿ ಬಳಸಿಕೊಳ್ಳಲು ಹಳೆಯ ಐರಾವತ ಹವಾನಿಯಂತ್ರಿತ ಬಸ್ಸನ್ನು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ ಉಚಿತವಾಗಿ ನೀಡಲಾಗಿದೆ.

‘ದೇಶದಲ್ಲೇ ಮೊದಲ ಪ್ರಯತ್ನವಾಗಿ 5 ಹಾಸಿಗೆಯ ಐಸಿಯು ಬಸ್ ನಿರ್ಮಿಸಲಾಗಿದ್ದು, ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿನ 21 ಗ್ರಾಮಗಳ 1303 ಜನ ಇದರ ಪ್ರಯೋಜನ ಪಡೆದಿದ್ದಾರೆ. ಈ ಎಲ್ಲ ಉಪಕ್ರಮಗಳನ್ನು ಗುರುತಿಸಿ ಸಾಮಾಜಿಕ ಕಳಕಳಿ ಪ್ರಶಸ್ತಿಯನ್ನು ರೋಟರಿ ಸಂಸ್ಥೆ ನೀಡಿದೆ’ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.