ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ: ಬೆಂಗಳೂರು–ಬೀದರ್‌ ಮಧ್ಯೆ ಸುವಿಧಾ ವಿಶೇಷ ರೈಲು

Last Updated 10 ಅಕ್ಟೋಬರ್ 2019, 14:09 IST
ಅಕ್ಷರ ಗಾತ್ರ

ಕಲಬುರ್ಗಿ:ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣಿಯನ್ನು ನಿವಾರಿಸಲು ನೈರುತ್ಯ ರೈಲ್ವೆಯು ಅಕ್ಟೋಬರ್‌ 25 ಹಾಗೂ 28ರಂದು ಬೆಂಗಳೂರು–ಬೀದರ್‌ ಮಧ್ಯೆ ವಿಶೇಷ ಸುವಿಧಾ ರೈಲನ್ನು ಓಡಿಸಲಿದೆ.

ಬೆಂಗಳೂರಿನ ಯಲಹಂಕದಿಂದ ಅ 25 ಹಾಗೂ 28ರಂದು ಸಂಜೆ 5ಕ್ಕೆ ಹೊರಡುವ ಸುವಿಧಾ ರೈಲು (82661) ಗೌರಿಬಿದನೂರು, ಹಿಂದುಪುರ, ಧರ್ಮಾವರಂ, ಅನಂತಪುರ, ಗುಂತಕಲ್‌, ಮಂತ್ರಾಲಯ ರೋಡ್‌, ರಾಯಚೂರು, ಯಾದಗಿರಿ, ವಾಡಿ, ಕಲಬುರ್ಗಿ, ಕಮಲಾಪುರ, ಹುಮನಾಬಾದ್‌ ಮೂಲಕ ಮರುದಿನ ಬೆಳಿಗ್ಗೆ 7.30ಕ್ಕೆ ಬೀದರ್‌ನ ಖಾನಾಪುರ ಡೆಕ್ಕನ್‌ ರೈಲು ನಿಲ್ದಾಣ ತಲುಪಲಿದೆ.

ಬೀದರ್‌ನಿಂದ (82662) 26 ಹಾಗೂ 29ರಂದು ಸಂಜೆ 4ಕ್ಕೆ ಹೊರಟು ಮರುದಿನ ಬೆಳಿಗ್ಗೆ 8.40ಕ್ಕೆ ಯಲಹಂಕ ತಲುಪಲಿದೆ.

ಈ ರೈಲು ಒಂದು ಎ.ಸಿ. ತ್ರಿ ಟಯರ್‌, 10 ದ್ವಿತೀಯ ದರ್ಜೆ ಸ್ಲೀಪರ್‌ ಬೋಗಿಗಳು ಹಾಗೂ ಎರಡು ದ್ವಿತೀಯ ದರ್ಜೆ ಲಗೇಜ್‌ ಕಂ ಬ್ರೇಕ್‌ ವ್ಯಾನ್‌ ಹೊಂದಿರಲಿದೆ. ಬೇಡಿಕೆ ಹೆಚ್ಚಿದಂತೆ ಪ್ರಯಾಣ ದರವೂ ಹೆಚ್ಚಳವಾಗಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT