ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ರಾಜ್ಯ ಸಮಾವೇಶ: ಊಟಕ್ಕೆ 33 ಸಾವಿರ ಕೆ.ಜಿ ಚಿಕನ್‌ ಬಿರಿಯಾನಿ ಸಿದ್ಧ

Published 28 ಜನವರಿ 2024, 7:09 IST
Last Updated 28 ಜನವರಿ 2024, 7:09 IST
ಅಕ್ಷರ ಗಾತ್ರ

ಚಿತ್ರದುರ್ಗ: ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಚಿತ್ರದುರ್ಗದಲ್ಲಿ ಆಯೋಜಿಸಿದ ಶೋಷಿತರ ಜಾಗೃತಿ ರಾಜ್ಯ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ನಗರದ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠದ ವಿಶಾಲ ಮೈದಾನದಲ್ಲಿ ಹಾಕಿದ ಬೃಹತ್ ಪೆಂಡಾಲ್ ನತ್ತ ಜನರು ಹರಿದು ಬರುತ್ತಿದ್ದಾರೆ. ಪ್ರೇಕ್ಷಕರನ್ನು ರಂಜಿಸಲು ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ಶುರುವಾಗಿದೆ. ಪ್ರಧಾನ ವೇದಿಕೆಯಲ್ಲಿ 200 ಆಸನ ವ್ಯವಸ್ಥೆ ಮಾಡಲಾಗಿದ್ದು, ತಲಾ 150 ಆಸನಗಳು ಇರುವ ಎರಡು‌ ಸಮಾನಾಂತರ ವೇದಿಕೆಯಲ್ಲಿ ಗಣ್ಯರು ಆಸೀನರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಸಚಿವ ಸಂಪುಟದ ಸದಸ್ಯರ ಆಗಮನಕ್ಕೆ ಜನರು ಕಾಯುತ್ತಿದ್ದಾರೆ. ಸುಮಾರು 150 ಎಕರೆ ಪ್ರದೇಶದ ಮೈದಾನದಲ್ಲಿರುವ ಪೆಂಡಾಲ್ ನಲ್ಲಿ ಲಕ್ಷಾಂತರ ಕುರ್ಚಿಗಳನ್ನು ಅಳವಡಿಸಲಾಗಿದ್ದು, ಈಗಷ್ಟೇ ಭರ್ತಿ ಆಗುತ್ತಿವೆ. ಕಾರ್ಯಕ್ರಮ ವೀಕ್ಷಣೆಗೆ 23 ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.

ಸಮಾವೇಶದಲ್ಲಿ ಪಾಲ್ಗೊಳ್ಳುವ ಜನರಿಗೆ ಸಸ್ಯಾಹಾರ ಮತ್ತು ಮಾಂಸಾಹಾರ ವ್ಯವಸ್ಥೆ ಮಾಡಲಾಗಿದೆ. ಊಟಕ್ಕೆ ಸಾವಿರ ಕೌಂಟರ್ ಗಳನ್ನು ತೆರೆಯಲಾಗಿದೆ. ಸುಮಾರು 33 ಸಾವಿರ ಕೆ.ಜಿ ಚಿಕನ್‌ ಬಿರಿಯಾನಿ ಸಿದ್ಧವಾಗಿದೆ. ಸಸ್ಯಹಾರಿಗಳಿಗೆ ಟೊಮ್ಯಾಟೋ ಬಾತ್, ಮೊಸರನ್ನ ವ್ಯವಸ್ಥೆ ಮಾಡಲಾಗಿದೆ. ಊಟ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT