ಸುವರ್ಣ ವಿಧಾನಸೌಧ (ಬೆಳಗಾವಿ): ಇಲ್ಲಿನ ವಿಧಾನಸಭೆಯ ಸಭಾಂಗಣದಲ್ಲಿ ಸಭಾಧ್ಯಕ್ಷರು ಆಸೀನರಾಗಲು ₹45 ಲಕ್ಷದ ವೆಚ್ಚದಲ್ಲಿ ಬೀಟೆ ಮರದ ಹೊಸ ಪೀಠವನ್ನು ಅಳವಡಿಸಲಾಗಿದೆ. ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಹೊಸ ಪೀಠದಲ್ಲಿ ಕುಳಿತು ಕಲಾಪ ನಡೆಸಿದರು.

ಹೊಸ ಪೀಠ ಅಳವಡಿಸಿರುವ ಕುರಿತು ಸದನದಲ್ಲಿ ಪ್ರಕಟಿಸಿದ ಖಾದರ್, ‘ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯಲ್ಲಿನ ಪೀಠದ ಪ್ರತಿರೂಪದಂತಿರುವ ಹೊಸ ಪೀಠವನ್ನು ಇಲ್ಲಿ ಅಳವಡಿಸಲಾಗಿದೆ. ಪೀಠದಲ್ಲಿ ಕುಳಿತು ನಾನು ಅದನ್ನು ಉದ್ಘಾಟಿಸಿದ್ದೇನೆ’ ಎಂದರು.

ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ನಿರ್ಮಾಣದ ಸಂದರ್ಭದಲ್ಲಿ ತಮ್ಮ ಕನಸಿನಂತೆ ವಿಧಾನಸಭೆಯ ಅಧ್ಯಕ್ಷರ ಪೀಠವನ್ನು ರೂಪಿಸಿದ್ದರು. ಶಿವಮೊಗ್ಗ ಜಿಲ್ಲೆಯಿಂದ ಬೀಟೆ ಮರವನ್ನು ತರಿಸಿ, ಅದರಿಂದ ಪೀಠವನ್ನು ರಚಿಸಲಾಗಿತ್ತು. ಅದೇ ಮಾದರಿಯಲ್ಲಿ ಗಂಡಭೇರುಂಡ ಲಾಂಛನ, ಸಿಂಹ ಲಾಂಛನ, ಸೂರ್ಯಕಾಂತಿ ಹೂವಿನ ಚಿತ್ತಾರದ ಮೇಲ್ಭಾಗ, ಮಾವಿನಕಾಯಿಯ ಚಿತ್ರಗಳುಳ್ಳ ಹೊಸ ಪೀಠವನ್ನು ರಚಿಸಲಾಗಿದೆ.

‘ಸಭಾಧ್ಯಕ್ಷರ ಹುದ್ದೆಗೆ ಸಂವಿಧಾನದಲ್ಲಿ ದೊಡ್ಡ ಗೌರವವಿದೆ. ಅದೇ ರೀತಿ ಪೀಠಕ್ಕೂ ಗೌರವವಿದೆ. ಈ ಕಾರಣಕ್ಕಾಗಿ ಬೆಂಗಳೂರಿನ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಇರುವಂತಹ ಪೀಠ ನಿರ್ಮಿಸಲಾಗಿದೆ’ ಎಂದು ಖಾದರ್ ವಿಧಾನಸಭೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.