ಧಾರವಾಡದ ಸಮೀಪದ ತೇಗೂರಿನಲ್ಲಿರುವ ಎಮ್ಮೆ ತಳಿ ಸಂವರ್ಧನಾ ಕೇಂದ್ರವು ಸ್ವಾತಂತ್ರ್ಯ ಪೂರ್ವದಿಂದಲೇ ಜಾನುವಾರು ತಳಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಹೆಸರಾಗಿದ್ದು, ಮಿಶ್ರ ಬೇಸಾಯದ ಮಾದರಿಯಾಗಿದೆ. 1910ರಲ್ಲಿ ಸ್ಥಾಪನೆಯಾದ ಈ ಕೇಂದ್ರದಲ್ಲಿ ಮುರ್ರಾ, ಸುರ್ತಿ ತಳಿಯ ಎಮ್ಮೆಗಳು ಮತ್ತು ಕೃಷ್ಣಾ ವ್ಯಾಲಿ ಆಕಳುಗಳ ಸಂರಕ್ಷಣೆ ನಡೆಯುತ್ತಿದೆ. ಇದೇ ಕೇಂದ್ರದಲ್ಲಿ ಉತ್ತರ ಕರ್ನಾಟಕದ ಏಕೈಕ ಸರ್ಕಾರಿ ಹಂದಿ ತಳಿ ಸಂವರ್ಧನಾ ಘಟಕವಿದ್ದು, ಡ್ಯುರಾಕ್, ಯಾರ್ಕ್ಶೇರ್ ಮತ್ತು ಲ್ಯಾಂಡ್ರೆಸ್ ತಳಿಯ ಹಂದಿಗಳನ್ನು ಸಾಕಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.