ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಿವೇಶನಗಳನ್ನು ಕೊಟ್ಟಿದ್ದು ಬಿಜೆಪಿ ಸರ್ಕಾರ. 50:50 ಅನುಪಾತದಲ್ಲಿ ಮುಖ್ಯಮಂತ್ರಿ ಪತ್ನಿ ಒಬ್ಬರಿಗೆ ಮಾತ್ರ ನಿವೇಶನ ಕೊಟ್ಟಿಲ್ಲ. ನೂರಾರು ಜನರಿಗೆ ನಿವೇಶನಗಳನ್ನು ಕೊಟ್ಟಿದ್ದಾರೆ. ಇವರೊಬ್ಬರಿಗೆ ನಿವೇಶನ ಕೊಟ್ಟಿದ್ದರೆ ಟೀಕೆ ಮಾಡಬಹುದಿತ್ತು. ಕಾನೂನು ಬಾಹಿರವಾಗಿದ್ದರೆ ಸರ್ಕಾರ ಅಂದೇ ವಜಾ ಮಾಡುತ್ತಿತ್ತು’ ಎಂದರು.