ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿ ಹೋಗಿರುವ 19ನೇ ಗೇಟ್ ಜಾಗದಲ್ಲಿ ಶಾಶ್ವತ ಗೇಟ್ ಬದಲಿಗೆ ತಾತ್ಕಾಲಿಕವಾಗಿ ‘ಸ್ಟಾಪ್‌ಲಾಗ್ ಗೇಟ್’ ಅಳವಡಿಸುವುದು ಖಚಿತವಾಗಿದ್ದು, ಇದರ ನಿರ್ಮಾಣದ ಹೊಣೆಯನ್ನು ಮತ್ತೊಂದು ಕಂಪನಿಗೂ ನೀಡಲಾಗಿದೆ.
ನಾರಾಯಣ ಎಂಜಿನಿಯರಿಂಗ್ಸ್ ಮತ್ತು ಹಿಂದೂಸ್ತಾನ್ ಎಂಜಿನಿಯರಿಂಗ್ಸ್ ಕಂಪನಿಗಳು ಈಗಾಗಲೇ ಗೇಟ್‌ಗಳ ತಯಾರಿಕಾ ಕೆಲಸ ಆರಂಭಿಸಿವೆ. ಇದನ್ನು ಚುರುಕುಗೊಳಿಸಲು ಈಗ ಜಿಂದಾಲ್ ಕಂಪನಿಗೂ ನೀಡಲಾಗಿದೆ. ಯಾವ ಕಂಪನಿ ವೇಗವಾಗಿ ಕೆಲಸ ಮುಗಿಸುತ್ತದೆಯೊ ಅದನ್ನೇ ಮೊದಲು ಅಳವಡಿಸಲಾಗುತ್ತದೆ.
‘ಸ್ಥಳೀಯವಾಗಿ ತಯಾರಿಸಲಾಗುತ್ತಿರುವ ಗೇಟ್‌ಗಳ ವಿನ್ಯಾಸಕ್ಕೆ ಈಗಾಗಲೇ ಮಂಡಳಿಯ ಸಭೆಯಲ್ಲಿ ಅನುಮೋದನೆ ಲಭಿಸಿದ್ದು, ಒಂದೆರಡು ದಿನಗಳಲ್ಲಿ ಗೇಟ್ ಅಳವಡಿಕೆ ಕೆಲಸ ಆರಂಭಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.