ಬೆಂಗಳೂರು: ‘ರಾಜ್ಯದಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ದೊರೆಯುತ್ತಿಲ್ಲ ಮತ್ತು ರಸಗೊಬ್ಬರದ ತೀವ್ರ ಕೊರತೆ ಉಂಟಾಗಿದೆ. ರಾಜ್ಯ ಸರ್ಕಾರದ ವೈಫಲ್ಯವೇ ಇದಕ್ಕೆಲ್ಲಾ ಕಾರಣ. ಇದರ ವಿರುದ್ಧ ಸೋಮವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ಹೀಗಾಗಿಯೇ ಇಂತಹ ಬಿಕ್ಕಟ್ಟು ಎದುರಾಗಿದೆ’ ಎಂದರು.

‘ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಮೊದಲು ಆರಂಭವಾಗಿದ್ದು, ಬೇಸಾಯವೂ ಆರಂಭವಾಗುತ್ತದೆ ಎಂಬ ಅರಿವು ರಾಜ್ಯ ಸರ್ಕಾರಕ್ಕೆ ಮತ್ತು ಕೃಷಿ ಸಚಿವರಿಗೆ ಇರಬೇಕಿತ್ತು. ಇಡೀ ರಾಜ್ಯದಲ್ಲಿ ಒಂದೇ ಸಮಯದಲ್ಲಿ ಬಿತ್ತನೆ ಮಾಡುವುದಿಲ್ಲ. ಮೊದಲು ಬಿತ್ತನೆ ನಡೆಯುವ ಕಲಬುರ್ಗಿ, ಕೊಪ್ಪಳ, ಶಿವಮೊಗ್ಗ ಮತ್ತು ಇತರ ಜಿಲ್ಲೆಗಳಿಗೆ ಎಷ್ಟು ಬಿತ್ತನೆ ಬೀಜ ಹಾಗೂ ಯೂರಿಯಾ ಅಗತ್ಯವಿದೆ ಎಂಬ ಅಂದಾಜು ಕೃಷಿ ಸಚಿವರಿಗೆ ಇರಬೇಕಿತ್ತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರೈತರು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡುತ್ತಾರೆ ಎಂಬುದು ಗೊತ್ತಾದ ತಕ್ಷಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಹೆಚ್ಚುವರಿ ಯೂರಿಯಾ ಹಂಚಿಕೆ ಮಾಡುವಂತೆ ಕೋರಬೇಕಿತ್ತು. ಆದರೆ ಈಗ ಕೊರತೆ ತೀವ್ರವಾದ ನಂತರ ಪತ್ರ ಬರೆದಿದ್ದಾರೆ. ಇವರಿಗೆ ರೈತರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದೆಯೇ’ ಎಂದು ಪ್ರಶ್ನಿಸಿದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ, ಅಧಿಕ ಬಿತ್ತನೆಯಾಗುವ ಸಂದರ್ಭದಲ್ಲಿ ಅನುಕೂಲಕ್ಕೆ ಬರಲಿ ಎಂದು ಕಾಪು ದಾಸ್ತಾನಿಗೆ ₹1,000 ಕೋಟಿ ಮೀಸಲಿರಿಸಿದ್ದರು. ಸಿದ್ದರಾಮಯ್ಯ ಅವರು ಕಾಪು ದಾಸ್ತಾನು ಅನುದಾನವನ್ನು ₹400 ಕೋಟಿಗೆ ಇಳಿಸಿದ್ದಾರೆ. ರೈತರ ಪರವಾದ ಯಾವ ಕೆಲಸವನ್ನೂ ಈ ಸರ್ಕಾರ ಮಾಡುತ್ತಿಲ್ಲ’ ಎಂದರು.

ಕೇಂದ್ರವು ರಾಜ್ಯಕ್ಕೆ 8.70 ಲಕ್ಷ ಟನ್ ಯೂರಿಯಾ ನೀಡಿದೆ. ಆದರೆ ರಾಜ್ಯದಲ್ಲಿ ಇರುವುದು 5.25 ಲಕ್ಷ ಟನ್ ಮಾತ್ರ. ಉಳಿದ 2.50 ಲಕ್ಷ ಟನ್ ಯೂರಿಯಾ ಎಲ್ಲಿಗೆ ಹೋಯಿತು?
ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಯೂರಿಯಾ ಕೊರತೆಯನ್ನು ನಿವಾರಿಸಲೆಂದೇ ಅದಕ್ಕಿಂತ ಹೆಚ್ಚು ಪರಿಣಾಮಕಾರಿಯಾದ ನ್ಯಾನೊ ಯೂರಿಯಾವನ್ನು ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸಿ ರಾಜ್ಯಗಳಿಗೆ ವಿತರಿಸಿದೆ. ಆದರೆ ರಾಜ್ಯ ಸರ್ಕಾರವು ನ್ಯಾನೊ ಯೂರಿಯಾ ಬಳಕೆ ಉತ್ತೇಜನವನ್ನು ಕಡೆಗಣಿಸಿದೆ. ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವೇ ಬರಬೇಕೇ’ ಎಂದು ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

‘ನಾಲ್ಕಾರು ಚೀಲ ಯೂರಿಯಾ ಬಳಸುವಲ್ಲಿ ಒಂದೆರಡು ಬಾಟಲಿನಷ್ಟು ನ್ಯಾನೊ ಯೂರಿಯಾ ಸಾಕಾಗುತ್ತದೆ. ಅದರ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ ಬಳಕೆಯನ್ನು ಉತ್ತೇಜಿಸಿದ್ದಿದ್ದರೆ ಈಗ ಯೂರಿಯಾ ಕೊರತೆ ಉಂಟಾಗುತ್ತಿರಲಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಸರ್ಕಾರ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರು ತಮ್ಮ ಕರ್ತವ್ಯ ಮರೆತು ರೈತರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.