ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳೂರಗೆ ಯುವ, ಸುಧಾ ಮೂರ್ತಿ, ವಿಜಯಶ್ರೀಗೆ ಬಾಲ ಪುರಸ್ಕಾರ

Published 23 ಜೂನ್ 2023, 12:53 IST
Last Updated 23 ಜೂನ್ 2023, 12:53 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ 2023ನೇ ಸಾಲಿನ ‘ಬಾಲ ಸಾಹಿತ್ಯ ಪುರಸ್ಕಾರ’ ವಿಜಯಶ್ರೀ ಹಾಲಾಡಿ ಅವರ ಮಕ್ಕಳ ಕಾದಂಬರಿ ‘ಸೂರಕ್ಕಿ ಗೇಟ್’ಗೆ ಮತ್ತು ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಗಂಗಾವತಿಯ ‘ಮಂಜುನಾಯಕ ಚಳ್ಳೂರು’ ಅವರ ‘ಫೂ ಮತ್ತು ಇತರ ಕತೆಗಳು’ ಕಥಾ ಸಂಕಲನಕ್ಕೆ ಲಭಿಸಿದೆ.

ಕನ್ನಡದವರೇ ಆದ ಮತ್ತು ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಕೃಷಿ ಮಾಡಿದ ಲೇಖಕಿ ಸುಧಾ ಮೂರ್ತಿ ಅವರು ಬರೆದ ‘ಗ್ರ್ಯಾಂಡ್‌ಪೇರೆಂಟ್ಸ್‌ ಬ್ಯಾಗ್‌ ಆಫ್‌ ಸ್ಟೋರೀಸ್‌’ ಕೃತಿಗೆ ಇಂಗ್ಲಿಷ್‌ ಭಾಷಾ ವಿಭಾಗದಲ್ಲಿ ‘ಬಾಲ ಸಾಹಿತ್ಯ ಪುರಸ್ಕಾರ’ ದೊರೆತಿದೆ.

ಪ್ರಶಸ್ತಿ ಪುರಸ್ಕೃತರು ತಲಾ ₹50 ಸಾವಿರ ನಗದು ಹಾಗೂ ಫಲಕಗಳನ್ನು ಪಡೆಯಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ. 

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಳ್ಳೂರಿನ ಮಂಜುನಾಯಕ ಅವರು ಪತ್ರಕರ್ತರಾಗಿದ್ದು, ಪ್ರಸ್ತುತ ಕನ್ನಡದ ಮನರಂಜನಾ ವಾಹಿನಿ ಕಲರ್ಸ್‌ ಕನ್ನಡದಲ್ಲಿ ಉದ್ಯೋಗಿ. ‘ಫೂ ಮತ್ತು ಇತರ ಕತೆಗಳು’ ಅವರ ಮೊದಲ ಕಥಾಸಂಕಲನವಾಗಿದೆ.

ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿ ಗ್ರಾಮದವರು. ‘ಬೀಜ ಹಸಿರಾಗುವ ಗಳಿಗೆ’, ‘ಪಪ್ಪು ನಾಯಿಯ ಪ್ರೀತಿ’ ಇವರ ಕೃತಿಗಳು. ‘ಪಪ್ಪು ನಾಯಿಯ ಪ್ರೀತಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015ರ ಪುಸ್ತಕ ಬಹುಮಾನ ದೊರೆತಿದೆ. 

ಯುವ ಪುರಸ್ಕಾರಕ್ಕೆ ಕನ್ನಡ ಹಿರಿಯ ವಿಮರ್ಶಕರಾದ ಡಾ.ಎಚ್‌.ಎಸ್‌.ರಾಘವೇಂದ್ರ ರಾವ್‌, ಡಾ.ಕೆ.ಮರುಳಸಿದ್ಧಪ್ಪ, ಎಂ.ಆರ್‌.ಕಮಲಾ ತೀರ್ಪುಗಾರರಾಗಿದ್ದರು. ಬಾಲ ಸಾಹಿತ್ಯ ಪುರಸ್ಕಾರಕ್ಕೆ ಲೇಖಕರಾದ ಡಾ.ಜಯಶ್ರೀ ಸಿ.ಕಂಬಾರ, ಡಾ.ಆನಂದ ವಿ.ಪಾಟೀಲ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತೀರ್ಪುದಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT