ಬೆಳಗಾವಿ: ರಾಜ್ಯಸಭೆಯಲ್ಲಿ ಗದ್ದಲದ ವಿಚಾರಕ್ಕೆ 12 ಸದಸ್ಯರನ್ನು ಅಮಾನತುಗೊಳಿಸಿದ ಕ್ರಮವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಾಗತಿಸಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸದ್ಯ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಡೆಯುತ್ತಿರುವ ಘಟನೆಗಳು ಸ್ಪೀಕರ್ ಆದ ನನಗೆ ವೈಯಕ್ತಿಕವಾಗಿ ನೋವು ತಂದಿವೆ. ಕಳೆದ ಲೋಕಸಭಾ ಅಧಿವೇಶನದಲ್ಲಿ ನಡೆದ ಘಟನೆ ಖಂಡಿಸಿ ಪತ್ರ ಬರೆದಿದ್ದೆ. ರಾಜ್ಯಸಭೆಯಲ್ಲೇ ಹೀಗಾದರೆ, ವಿಧಾನಸಭೆಯಲ್ಲಿ ಹೇಗೆ ನಡೆಯಬಹುದೆಂಬ ಆತಂಕ ವ್ಯಕ್ತಪಡಿಸಿದ್ದೆ’ ಎಂದು ತಿಳಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬಬೇಕಾದವರೆ ಶಿಸ್ತು ಉಲ್ಲಂಘಿಸುವುದು ಸಮಂಜಸವಲ್ಲ. ರಾಜಕೀಯ ಹಾಗೂ ತತ್ವ–ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಅಶಿಸ್ತಿನಿಂದ ವರ್ತಿಸುವುದು ಯಾರಿಗೂ ಶೋಭೆ ತರುವುದಿಲ್ಲ. ನಮ್ಮ ನಡವಳಿಕೆ ಚೌಕಟ್ಟಿನಲ್ಲಿರಬೇಕು. ಸದನದಲ್ಲಿ ನಡೆಯುವ ಚರ್ಚೆಗಳು ರಚನಾತ್ಮಕವಾಗಿರಬೇಕು. ನಿಯಮ ಮೀರಿ ವರ್ತಿಸಿದರೆ ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಶಾಸಕರಿಗೆ ಎಚ್ಚರಿಕೆ ನೀಡಿದರು.

ಇವನ್ನೂ ಓದಿ
*ಸಂಸದರ ಅಮಾನತು ವಾಪಸ್ಗೆ ಆಗ್ರಹಿಸಿ ಪ್ರತಿಭಟನೆ: ಸಂಸತ್ತಿನ ಒಳಗೂ ಹೊರಗೂ ಧರಣಿ
*ರಾಜ್ಯಸಭಾ ಸಂಸದರ ಅಮಾನತು: ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿ-ಮಾಯಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.