‘ಹಿಂದಿನ ಮುಖ್ಯಮಂತ್ರಿ ಐದು ಸಹಿ ಮಾಡಿದರೆ ಅವರ ಮಗ 50 ಸಹಿ ಮಾಡುತ್ತಿದ್ದರು. ಅದರಲ್ಲಿ ಸಂಪಾದಿಸಿದ ಆ ಹಣವನ್ನು ವಿಮಾನದಲ್ಲಿ ಎಲ್ಲಿಗೆ ತೆಗೆದುಕೊಂಡು ಹೋದರು ಎಂಬುದರ ತನಿಖೆಗೆ ಎಸ್‌ಐಟಿ ರಚಿಸಬೇಕು’ ಎಂದು ಯಡಿಯೂರಪ್ಪ ಮತ್ತು ವಿಜಯೇಂದ್ರ ಹೆಸರು ಹೇಳದೆ ಕಾಂಗ್ರೆಸ್‌ನ ಪುಟ್ಟಣ್ಣ ಪ್ರಸ್ತಾಪಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು. ‘ರಾಜ್ಯಪಾಲರ ಭಾಷಣಕ್ಕೂ ಆ ವಿಷಯಕ್ಕೂ ಏನು ಸಂಬಂಧ’ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವಿಪಕ್ಷ ಉಪನಾಯಕ ಸುನಿಲ್ ವಲ್ಯಾಪುರೆ ಮಧ್ಯಪ್ರವೇಶಿಸಿ ‘ನೀ ಯಾವ್ಯಾವ ಪಾರ್ಟಿಲಿದ್ರಿ ಹೆಂಗೆ ಬಂದ್ರಿ ಅಂತ ಗೊತ್ತಿದೆ’ ಎಂದು ತಿರುಗೇಟು ನೀಡಿದರು. ‘ನೀವು ಹೇಗೆ ಬಂದ್ರಿ ಏನು ಅಂತ ನಮಗೆ ಗೊತ್ತು. ಪಕ್ಕದಲ್ಲೇ ವಿಶ್ವನಾಥ್ ಇದ್ದಾರೆ ಅವರನ್ನೇ ಕೇಳಿ’ ಎಂದ ಪುಟ್ಟಣ್ಣ ‘ಥೂ ನಿನ್ ಜನ್ಮಕ್ಕೆ’ ಎಂಬ ಪದ ಬಳಸಿದ್ದು ವಿಪಕ್ಷ ಸದಸ್ಯರನ್ನು ಕೆರಳಿಸಿತು.