ಬೆಂಗಳೂರು: ಪಾರ್ಕಿನ್ಸನ್ ರೋಗಿಗಳ ಸಂಖ್ಯೆ 2030ರ ವೇಳೆಗೆ ಮೂರು ಪಟ್ಟಿನಷ್ಟಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಆ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಪೂರಕವಾಗಿ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಲಂಡನ್ನ ಕಿಂಗ್ಸ್ ಕಾಲೇಜು ಮತ್ತು ಪಾರ್ಕಿನ್ಸನ್ ರೀಸರ್ಚ್ ಅಲಯನ್ಸ್ ಆಫ್ ಇಂಡಿಯಾ (ಪಿಆರ್ಎಐ) ಜಂಟಿಯಾಗಿ ಶನಿವಾರ ಆಯೋಜಿಸಿದ್ದ ‘ಪಾರ್ಕಿನ್ಸನ್’ ಕುರಿತ ವರ್ಚ್ಯುಯಲ್ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಈಗ ಪ್ರತಿ ಒಂದು ಲಕ್ಷ ಜನರಲ್ಲಿ 350ರಿಂದ 400 ಜನರಲ್ಲಿ ‘ಪಾರ್ಕಿನ್ಸನ್’ ರೋಗ ಕಾಣಿಸಿಕೊಳ್ಳುತ್ತಿದೆ. ಅಧ್ಯಯನಗಳ ಪ್ರಕಾರ, 2030ರ ವೇಳೆಗೆ ಇದು ಮೂರು ಪಟ್ಟಿನಷ್ಟಾಗಲಿದೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡ 1ರಷ್ಟು ಜನರಲ್ಲಿ ‘ಪಾರ್ಕಿನ್ಸನ್’ ರೋಗ ಕಂಡುಬರುವ ಸಾಧ್ಯತೆ ಇದೆ’ ಎಂದರು.

ನರರೋಗಕ್ಕೆ ಸಂಬಂಧಿಸಿದಂತೆ ನಿಮ್ಹಾನ್ಸ್ ಉತ್ತಮ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಪಾರ್ಕಿನ್ಸನ್ ರೋಗಕ್ಕೆ ಸಂಬಂಧಿಸಿದಂತೆ ಪಿಎಆರ್ಐ ಜತೆಗೂಡಿ ಸಂಶೋಧನೆಗಳನ್ನು ಆರಂಬಿಸಲಿದೆ. ಲಂಡನ್ನ ಕಿಂಗ್ಸ್ ಕಾಲೇಜು ಮತ್ತು ಪಿಎಆರ್ಐ ಸಹಯೋಗದಲ್ಲಿ ಶೈಕ್ಷಣಿಕ ತರಬೇತಿ ಹಾಗೂ ಸಂಶೋಧನೆಗಳನ್ನು ಕೈಗೊಳ್ಳುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಸುಧಾಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.