ನಾನು ಬರೆದ ‘ಉರಿವ ಬೆಂಕಿಗೆ ಮೈಯೆಲ್ಲಾ ಬಾಯಿ’ ಎನ್ನುವ ಕಥಾ ಸಂಕಲನದಲ್ಲಿ ಒಂದು ಕಥೆ ಇದೆ. ಅದರಲ್ಲಿ ಹೆಣ್ಣೊಬ್ಬಳು ತನ್ನ ಗಂಡನನ್ನು ಬಿಟ್ಟು ಬೇರೆಯವನನಿಂದ ಮಗು ಪಡೆದುಕೊಳ್ಳಲು ನಿರ್ಧರಿಸುತ್ತಾಳೆ. ಈ ಕಥೆಯ ಕುರಿತು ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಚರ್ಚೆ ನಡೆಯುತ್ತಿತ್ತು. ಆಗ ಖ್ಯಾತ ವಿಮರ್ಶಕರೊಬ್ಬರು ಪ್ರತಿಕ್ರಿಯಿಸಿ ‘ಯಾಕ್ರಿ ಮಹಿಳೆಯರು ಹಿಂಗೆಲ್ಲ ಬರೀತೀರಾ?’ ಅಂತ ಕೇಳಿದರು ಪದ್ಮಿನಿ ನಾಗರಾಜು ಲೇಖಕಿ ---------- ‘ನಿಮ್ಮ ಅನುಭವನಾ?’ ನಾನು ‘ಪಯಣ’ ಅಂತ ಒಂದು ಕಥೆ ಬರೆದಿದ್ದೆ. ಅದರಲ್ಲಿ ರೈಲಿನಲ್ಲಿ ಪ್ರಯಾಣಿಸುವ ವೇಳೆ ಹೆಣ್ಣೊಬ್ಬಳು ಪುರುಷನೊಂದಿಗೆ ಬರ್ಥ್ ಅನ್ನು ಹಂಚಿಕೊಳ್ಳುವ ಕಥೆ ಬರುತ್ತದೆ. ಈ ಕಥೆ ಓದಿದ ಹಲವರು ನನ್ನ ಬಳಿ ಬಂದು ಇದು ನಿಮ್ಮ ಸ್ವಂತ ಅನುಭವವೇ