ನವದೆಹಲಿ: ಹಾಸನ ಜಿಲ್ಲೆಯಲ್ಲಿ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಾಗಿ 267 ಎಕರೆ (107 ಹೆಕ್ಟೇರ್) ಅರಣ್ಯದಲ್ಲಿ ನಿಯಮಬಾಹಿರವಾಗಿ ಕಾಮಗಾರಿಗಳನ್ನು ತಡೆಯದೇ ಅರಣ್ಯ ಇಲಾಖೆ ಗಂಭೀರ ಲೋಪ ಎಸಗಿದೆ. ಈ ಪ್ರಕರಣದಲ್ಲಿ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದ ವರದಿ ಬೊಟ್ಟು ಮಾಡಿದೆ.

ಯೋಜನೆಯಲ್ಲಿನ ನಿಯಮ ಉಲ್ಲಂಘನೆಗಳ ಬಗ್ಗೆ ಪರಿಶೀಲನೆ ನಡೆಸಿ ಸಚಿವಾಲಯದ ಪ್ರಾದೇಶಿಕ ಕಚೇರಿ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಜಂಟಿ ವರದಿ ಸಲ್ಲಿಸಬೇಕು ಎಂದು ಕೇಂದ್ರ ಅರಣ್ಯ ಸಲಹಾ ಸಮಿತಿ ನಿರ್ದೇಶನ ನೀಡಿತ್ತು. ಪ್ರಾದೇಶಿಕ ಕಚೇರಿಯು ಪ್ರತ್ಯೇಕವಾಗಿ ವರದಿ ಸಲ್ಲಿಸಬಹುದು ಎಂದೂ ಸಮಿತಿ ತಿಳಿಸಿತ್ತು. ಅರಣ್ಯ ಇಲಾಖೆಯು ಡಿಸೆಂಬರ್ 12ರಂದು ವರದಿ ಸಲ್ಲಿಸಿ, ‘ನಿಯಮಬಾಹಿರವಾಗಿ ಕಾಮಗಾರಿ ನಡೆದಿರುವುದು ನಿಜ’ ಎಂದು ಒಪ್ಪಿಕೊಂಡಿತ್ತು. ಪ್ರಾದೇಶಿಕ ಕಚೇರಿಯು ಡಿಸೆಂಬರ್ 29ರಂದು 124 ಪುಟಗಳ ಪ್ರತ್ಯೇಕ ವರದಿ ಸಲ್ಲಿಸಿದೆ. ಸಚಿವಾಲಯದ ಸಹಾಯಕ ಮಹಾನಿರ್ದೇಶಕರಿಗೆ (ಅರಣ್ಯ) ವರದಿ ಸಲ್ಲಿಸಿರುವ ಉಪ ಮಹಾ ನಿರ್ದೇಶಕಿ ಪ್ರಣಿತಾ ಪೌಲ್, ‘ಈ ನಿಟ್ಟಿನಲ್ಲಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ.

ಅರಣ್ಯ ಸಚಿವಾಲಯಕ್ಕೆ ಅಕ್ಟೋಬರ್ 8ರಂದು ಸಮಜಾಯಿಷಿ ನೀಡಿದ್ದ ರಾಜ್ಯ ಸರ್ಕಾರ, ‘107.87 ಹೆಕ್ಟೇರ್ನಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ಕೇಂದ್ರದ ಸ್ಥಳ ಪರಿಶೀಲನಾ ವರದಿ ತಿಳಿಸಿದೆ. ಆದರೆ, ಕಂದಾಯ ದಾಖಲೆಗಳಲ್ಲಿ 107.83 ಹೆಕ್ಟೇರ್ ಪ್ರದೇಶವನ್ನು ಅರಣ್ಯ ಎಂದು ದಾಖಲಿಸಿಲ್ಲ. 107.83 ಹೆಕ್ಟೇರ್ಗಳಲ್ಲಿ ಹೆಚ್ಚಿನವು ಕೃಷಿ ಜಮೀನು. ಈ ಪ್ರದೇಶ ಸ್ಥಳೀಯ ರೈತರ ಸ್ವಾಧೀನದಲ್ಲಿದೆ’ ಎಂದು ತಿಳಿಸಿತ್ತು.

‘10 ಸಾವಿರ ಎಕರೆ ಜಾಗವು ಐದಳ್ಳ ಅಮೃತ ಕಾವಲ್ಗೆ ಸೇರಿದ್ದು ಎಂದು 1898ರ ಮೇ 13ರ ಗಜೆಟ್ ಅಧಿಸೂಚನೆಯಲ್ಲೇ ಇದೆ. ಆದರೂ, ವಿಶ್ವೇಶ್ವರಯ್ಯ ಜಲ ನಿಗಮವು ಕಾಡಿನಲ್ಲಿ ಕಾಮಗಾರಿ ನಡೆಸಲು ಅನುವು ಮಾಡಿಕೊಟ್ಟು ಅರಣ್ಯ ಇಲಾಖೆ ಲೋಪ ಎಸಗಿದೆ. ಈ ಬಗ್ಗೆ ಇಲಾಖೆಯಿಂದ ವಿವರಣೆ ಕೇಳಲಾಗಿದೆ’ ಎಂದು ಪೌಲ್ ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಪರಿಸರ ಸಚಿವಾಲಯದ ವರದಿಯಲ್ಲೇನಿದೆ?

l ಬೇಲೂರು ತಾಲ್ಲೂಕಿನ ಐದಳ್ಳ ಅಮೃತ ಕಾವಲ್ನಲ್ಲಿ 84.46 ಹೆಕ್ಟೇರ್ ಅರಣ್ಯ ಭೂ ಉಲ್ಲಂಘನೆ ಸಂಭವಿಸಿದೆ. ಅದರಲ್ಲಿ 19.11 ಹೆಕ್ಟೇರ್ ಅನ್ನು ಜಲ ನಿಗಮವು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು ಎಂದು ಸೂಚಿಸಲಾಗಿದೆ.

l ಸೀಗೆಗುಡ್ಡ ಮೀಸಲು ಅರಣ್ಯದಲ್ಲಿ 21.93 ಹೆಕ್ಟೇರ್ನಲ್ಲಿ ಉಲ್ಲಂಘನೆ ನಡೆದಿದ್ದು, ಅದರಲ್ಲಿ 2.397 ಹೆಕ್ಟೇರ್ ಪ್ರದೇಶವನ್ನು ನಿಗಮವು ಅರಣ್ಯ ಇಲಾಖೆಗೆ ಹಿಂತಿರುಗಿಸಲು ಒಪ್ಪಿದೆ. 2,072 ಹೆಕ್ಟೇರ್ ಹೊಂದಿರುವ ಈ ಪ್ರದೇಶವು 1895ರಲ್ಲೇ ಮೀಸಲು ಅರಣ್ಯವೆಂದು ಘೋಷಣೆಯಾಗಿದೆ. ಇಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆದಿಲ್ಲ.

l ರಾಮದೇವರಹಳ್ಳ ಕಾವಲ್ ಅರಣ್ಯದಲ್ಲಿ 0.132 ಹೆಕ್ಟೇರ್ ಉಲ್ಲಂಘನೆ ನಡೆದಿದ್ದು, ಅದರಲ್ಲಿ 0.018 ಹೆಕ್ಟೇರ್ ಪ್ರದೇಶವನ್ನು ನಿಗಮವು ಅರಣ್ಯ ಇಲಾಖೆಗೆ ಮರಳಿಸಲು ಒಪ್ಪಿದೆ. ಈ ಪ್ರದೇಶವು 1898ರಲ್ಲೇ ಮೀಸಲು ಅರಣ್ಯವೆಂದು ಘೋಷಣೆಯಾಗಿದೆ.

l ಮುಧುಡಿ ಪರಿಭಾವಿತ ಅರಣ್ಯದಲ್ಲಿ 1.33 ಹೆಕ್ಟೇರ್ ಉಲ್ಲಂಘನೆ ನಡೆದಿದ್ದು, ಅದರಲ್ಲಿ 0.051 ಹೆಕ್ಟೇರ್ ಪ್ರದೇಶವನ್ನು ನಿಗಮವು ಅರಣ್ಯ ಇಲಾಖೆಗೆ ಹಿಂತಿರುಗಿಸಲಿದೆ. 38.80 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಅರಣ್ಯವೆಂದು 2022ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಡೀಮ್ಡ್ ಅರಣ್ಯವೆಂದು ಘೋಷಿಸುವ ಮುನ್ನವೇ 2018 ಹಾಗೂ 2019ರಲ್ಲಿ ಕಾಮಗಾರಿ ನಡೆಸಲಾಗಿತ್ತು ಎಂದು ರಾಜ್ಯ ಸರ್ಕಾರ ಸಮಜಾಯಿಷಿ ನೀಡಿತ್ತು. ಆದರೆ, ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಒದಗಿಸಿಲ್ಲ.

ಉಪಗ್ರಹ ಚಿತ್ರಗಳಿಂದ ಅಕ್ರಮ ಬಯಲು

‘ಹೆಚ್ಚಿನ ನಿಯಮ ಉಲ್ಲಂಘನೆ ಪ್ರಕರಣಗಳು 2018ರ ಮಾರ್ಚ್ ಹಾಗೂ 2019ರ ಡಿಸೆಂಬರ್ ನಡುವೆ ಘಟಿಸಿತ್ತು. 0.04 ಹೆಕ್ಟೇರ್ ಉಲ್ಲಂಘನೆ ಪ್ರಕರಣದಲ್ಲಿ 2019ರಲ್ಲೇ ಎಫ್ಐಆರ್ ದಾಖಲಿಸಲಾಗಿತ್ತು ಎಂದು ರಾಜ್ಯ ಸರ್ಕಾರವು ಈ ಹಿಂದೆ ಉತ್ತರ ನೀಡಿತ್ತು. ಆದಾಗ್ಯೂ, ಸಚಿವಾಲಯವು 2019ರ (ಎಫ್ಐಆರ್ ದಾಖಲಿಸಿದ ವರ್ಷ) ಮೊದಲು ಮತ್ತು ನಂತರದ ಉಪಗ್ರಹ ಚಿತ್ರಗಳ ಪರಿಶೀಲನೆ ನಡೆಸಿತು. ಹೆಚ್ಚಿನ ಉಲ್ಲಂಘನೆಗಳು 2019-2022 ರ ಅವಧಿಯಲ್ಲಿ ಸಂಭವಿಸಿವೆ ಎಂದು ಉಪಗ್ರಹ ಚಿತ್ರಗಳಿಂದ ಗೊತ್ತಾಗಿದೆ’ ಎಂದು ಪೌಲ್ ಹೇಳಿದ್ದಾರೆ.

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಂದಾಯ ಇಲಾಖೆಯು ಸಣ್ಣ ಭೂಪ್ರದೇಶಗಳನ್ನು ಗುರುತಿಸಿರುವುದು ಕಂದಾಯ, ಭೂಮಾಪನಾ ಹಾಗೂ ಅರಣ್ಯ ಇಲಾಖೆಗಳ ಜಂಟಿ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.