ಬೆಂಗಳೂರು: ಸಭಾನಾಯಕ ಎಸ್.ಆರ್. ಪಾಟೀಲ ವಿಧಾನ ಪರಿಷತ್ತಿನಲ್ಲಿ ಮಂಗಳವಾರ ನೂತನ ಸಚಿವರನ್ನು ಪರಿಚಯಿಸುವಾಗ ಜನತಾ ಪರಿವಾರದಿಂದ ಬಂದವರೇ ಹೆಚ್ಚಾಗಿದ್ದುದು ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿತು.

ಆರ್.ವಿ.ದೇಶಪಾಂಡೆ, ಸತೀಶ್ ಜಾರಕಿಹೊಳಿ, ಎಚ್.ಎಸ್. ಮಹದೇವಪ್ರಸಾದ್ ಸೇರಿದಂತೆ ಒಬ್ಬೊಬ್ಬ ಸಚಿವರನ್ನು ಪರಿಚಯಿಸುವಾಗಲೂ ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ, `ಇವರು ನಮ್ಮವರು, ಇವರೂ ನಮ್ಮವರು' ಎಂದು ವಿವರಣೆ ನೀಡುತ್ತಿದ್ದರು. ಆಗ ಎದ್ದುನಿಂತ ಕಾಂಗ್ರೆಸ್ನ ಹಿರಿಯ ಸದಸ್ಯ ವೀರಣ್ಣ ಮತ್ತಿಕಟ್ಟಿ, `ಹೌದು, ಎಲ್ಲರೂ ಜನತಾ ಪರಿವಾರದವರೇ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ' ಎಂದುಬಿಟ್ಟರು.

`ನೀವು ಹೇಳಿದ್ದು ಅಕ್ಷರಶಃ ನಿಜ. ಪರಿಷತ್ತಿನಲ್ಲಿ ಒಬ್ಬರಿಗೇ ಸಚಿವ ಸ್ಥಾನ ಸಿಕ್ಕಿದೆ. ನಿಮಗೂ ಆ ಭಾಗ್ಯ ಸಿಗಬೇಕಿತ್ತು. ಕುಂತಿ ಮಕ್ಕಳಿಗೆ ರಾಜ್ಯವಿಲ್ಲ' ಎಂದು ಬಿಜೆಪಿ ಸದಸ್ಯರು ಅವರ ಕಾಲೆಳೆಯುವ ಯತ್ನ ಮಾಡಿದರು. ಅಷ್ಟರಲ್ಲಿ ಸಾವರಿಸಿಕೊಂಡ ಮತ್ತಿಕಟ್ಟಿ, `ನಾನು ಹೇಳಿದ್ದು, ನಾಣಯ್ಯನವರಿಗೆ ಸಚಿವ ಸ್ಥಾನ ಇಲ್ಲ ಎಂದೇ ಹೊರತು ನನಗಲ್ಲ. ನಮ್ಮ ಜೊತೆ ಇದ್ದಿದ್ದರೆ ಅವರಿಗೂ ಸಚಿವ ಸ್ಥಾನ ಸಿಗುತ್ತಿತ್ತು' ಎಂದು ಸ್ಪಷ್ಟನೆ ನೀಡಿದರು.

ಮಾತು ಎತ್ತ ಸಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಂಡ ದೇಶಪಾಂಡೆ, `ಈ ವಿಷಯದಲ್ಲಿ ಮಾತು ಬೆಳೆಸುವುದು ಬೇಡ. ನಾವೆಲ್ಲ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಸಚಿವರು' ಎಂದು ಚರ್ಚೆಗೆ ಅಂತ್ಯ ಹಾಡಿದರು. ಪಾಟೀಲರು ಉಳಿದ ಸಚಿವರ ಪರಿಚಯ ಮಾಡಿದರು.

ಅಡಿಕೆ ರಾಜಕೀಯ!
`ಅಡಿಕೆಗೆ ಬೆಂಬಲ ನೀಡಿದ್ದು ಯುಪಿಎ ಸರ್ಕಾರವೋ, ಎನ್ಡಿಎ ಸರ್ಕಾರವೋ'
-ಈ ಪ್ರಶ್ನೆ ವಿಧಾನ ಪರಿಷತ್ತಿನಲ್ಲಿ ಮಂಗಳವಾರ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ ಮತ್ತು ಸಚಿವ ಆರ್.ವಿ. ದೇಶಪಾಂಡೆ ಅವರ ನಡುವೆ ಬಿರುಸಿನ ವಾಗ್ವಾದಕ್ಕೆ ಕಾರಣವಾಯಿತು. ಇಬ್ಬರೂ ನಾಯಕರ ನಡುವೆ ಸವಾಲ್ ಮತ್ತು ಜವಾಬ್ಗಳ ವಿನಿಮಯವೂ ಆಯಿತು. ಅಡಿಕೆಗೆ ಬೆಂಬಲ ಬೆಲೆ ನೀಡಿದ್ದು ಎನ್ಡಿಎ ಸರ್ಕಾರ ಎಂದು ಸದಾನಂದಗೌಡರು ಹೇಳಿದರೆ, `ಇಲ್ಲ, ಅದನ್ನು ಯುಪಿಎ ಸರ್ಕಾರ ಕೊಟ್ಟಿದ್ದು' ಎಂದು ದೇಶಪಾಂಡೆ ತಿಳಿಸಿದರು. `ಈ ಮಾತನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಸಿದ್ಧ ಮಾಡಿ ತೋರಿಸುತ್ತೇವೆ' ಎಂದು ಇಬ್ಬರೂ ಘೋಷಿಸಿದರು.

`ರೈತರು ಯಾವ ಪಕ್ಷದ ಸ್ವತ್ತೂ ಅಲ್ಲ. ಅಡಿಕೆ ಬೆಳೆಗಾರರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ' ಎಂದು ದೇಶಪಾಂಡೆ ಹೇಳಿದರು. ಅದಕ್ಕೆ ಸಚಿವ ಎಚ್.ಕೆ. ಪಾಟೀಲ ದನಿಗೂಡಿಸಿದರು. `ಅಡಿಕೆ ರಾಜಕೀಯ ಮಾಡುವುದು ಬೇಡ' ಎಂದು ಆಡಳಿತ ಮತ್ತು ವಿರೋಧ ಪಕ್ಷದ ಬಣಗಳಿಂದ ಘೋಷಣೆಗಳು ಕೇಳಿಬಂದವು.

`ಅವಧಿ ಮುಗಿದಿದೆ'
ಗಮನ ಸೆಳೆಯುವ ಸೂಚನೆಗಳಿಗೆ ಉತ್ತರಿಸಲು ಸೂಕ್ತ ಸಿದ್ಧತೆಗಳೊಂದಿಗೆ ಬಾರದ ಸಚಿವರನ್ನು ಜೆಡಿಎಸ್ ಸದಸ್ಯ ಎಂ.ಸಿ. ನಾಣಯ್ಯ ವಿಧಾನ ಪರಿಷತ್ನಲ್ಲಿ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

`ನಿಮಗೆ ಇನ್ನೂ ಇಷ್ಟು ಪ್ರೊಬೇಷನರಿ ಅವಧಿ ಬೇಕು, ಸೂಕ್ತ ಸಿದ್ಧತೆ ಮಾಡಿಕೊಳ್ಳದೆ ಬಂದರೆ ಹೇಗೆ' ಎಂದು ಅವರು ಏರುದನಿಯಲ್ಲಿ ಕೇಳಿದರು. `ಹಿಂದಿನ ಸರ್ಕಾರದ ಸಚಿವರು ಹೀಗೆ ಮಾಡಿದ್ದರಿಂದಲೇ ಜನ ನಿಮ್ಮನ್ನು ಆ ಸ್ಥಾನದಲ್ಲಿ ಕೂಡಿಸಿದ್ದಾರೆ. ನೀವೂ ಹಾಗೇ ವರ್ತಿಸಿದರೆ ಹೇಗೆ' ಎಂದು ಕಟಕಟೆಯಲ್ಲಿ ನಿಲ್ಲಿಸಿದರು. ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಲು ವಿಫಲವಾದ ಸಚಿವ ಆರ್.ವಿ. ದೇಶಪಾಂಡೆ ಸಬೂಬು ಹೇಳಲು ಹೋದರು.

`ಅಗತ್ಯವಾದ ಕಡತ ಇನ್ನೂ ಸಿಕ್ಕಿಲ್ಲ' ಎಂದು ತಿಳಿಸಿದರು. ಅದೇ ಎಳೆ ಹಿಡಿದು, `ಸಚಿವರ ಕೈಗೇ ಕಡತ ಸಿಗದಿದ್ದರೆ ಇದೆಂತಹ ಆಡಳಿತ' ಎಂದು ನಾಣಯ್ಯ ಪ್ರಶ್ನಿಸಿದರು.

`ಈಗಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ತುಸು ಸಮಯಾವಕಾಶ ಕೊಡಿ' ಎಂದು ದೇಶಪಾಂಡೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, `ನೀವು ಈಗ ಬಂದಿದ್ದೀರಿ. ಹಿಂದೆ ಬೇರೆಯವರು ಇದ್ದರು. ಆದರೆ, ಅಧಿಕಾರಿಗಳು ಅವರೇ ಇದ್ದಾರಲ್ಲ. ಉತ್ತರ ಸಿದ್ಧಪಡಿಸುವವರು ಅವರು ತಾನೆ. ಸರಿ ಉತ್ತರ ಕೊಡದಿದ್ದರೆ ಅವರನ್ನೇಕೆ ಕೆಲಸಕ್ಕೆ ಇಟ್ಟುಕೊಳ್ಳಬೇಕು' ಎಂದು ಕೇಳಿದರು. ಬುಧವಾರದಿಂದ ಅಗತ್ಯ ಸಿದ್ಧತೆಯೊಂದಿಗೆ ಬರಬೇಕು ಎಂದು ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.