ಹೈದರಾಬಾದ್ (ಪಿಟಿಐ): ಆಂಧ್ರ ವಿಧಾನ ಸಭೆಯಿಂದ ಮೂವರು ಟಿಆರ್‌ಎಸ್ ಮತ್ತು ಇಬ್ಬರು ಟಿಡಿಪಿ ಶಾಸಕರನ್ನು ಏಳು ದಿನಗಳ ಕಾಲ ಅಮಾನತುಗೊಳಿಸಲಾಗಿದೆ.

ಗುರುವಾರ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವರು ಭಾಷಣ ಮಾಡುತ್ತಿದ್ದ ವೇಳೆ ಈ ಶಾಸಕರು ಅಡ್ಡಿಯುಂಟು ಮಾಡಿ, ಅನುಚಿತವಾಗಿ ವರ್ತಿಸಿದ್ದರು.
ಈ ಹಿನ್ನೆಲೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಡಿ ಶ್ರೀಧರ ಬಾಬು ಅವರು ಶಾಸಕರ ಅಮಾನತಿಗೆ ನಿರ್ಣಯ ಮಾಡಿಸಿದಾಗ ಧ್ವನಿ ಮತದ ಮೂಲಕ ಒಪ್ಪಿಗೆ ನೀಡಲಾಯಿತು.

ಟಿಆರ್‌ಎಸ್‌ನ ಟಿ.ಹರೀಶ್ ರಾವ್, ಕೆ.ಸಾಮ್ಮಯ್ಯ, ವಿದ್ಯಾಸಾಗರ ಮತ್ತು ಟಿಡಿಪಿಯ ರೇವಂತ್ ರೆಡ್ಡಿ ಪಿ.ಮಹೇಂದ್ರ ರೆಡ್ಡಿ ಅಮಾನತುಗೊಂಡ ಶಾಸಕರು.
ಗುರುವಾರ ವಿಧಾನಸಭೆಯಲ್ಲಿ ನಡೆದ ಘಟನೆಯನ್ನು ಕಾನೂನು ಬಾಹಿರ, ಅನೀತಿಯುತವಾದ್ದದು, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಉಪಾಸಭಾದ್ಯಕ್ಷ ನಾಂದೇಡ್ಲ ಮನೋಹರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿವೇಶನ ಮುಂದೂಡಿಕೆ: ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಟಿಡಿಪಿ, ಟಿಆರ್‌ಎಸ್ ಹಾಗೂ ಮಾಜಿ ಸಂಸದ ವೈ.ಎಸ್.ಜಗಮೋಹನ್ ರೆಡ್ಡಿ ಬೆಂಬಲಿತ ಕಾಂಗ್ರೆಸ್ ಶಾಸಕರು ಆಂಧ್ರ ವಿಧಾನಸಭೆ ಅಧಿವೇಶನಕ್ಕೆ ಅಡ್ಡಿಯನ್ನು ಉಂಟು ಮಾಡಿದ ಹಿನ್ನೆಲೆಯಲ್ಲಿ ಎರಡು ಬಾರಿ ಕಲಾಪವನ್ನು ಮುಂದೂಡಲಾಯಿತು.

ವಿಧಾನ ಸಭಾ ಅಧಿವೇಶನ ಕಲಾಪ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಟಿಆರ್‌ಎಸ್ ಮತ್ತು ಟಿಡಿಪಿ ಶಾಸಕರು ತೆಲಂಗಾಣ, ಶುಲ್ಕ ವಾಪಸ್‌ಗೆ ಸಂಬಂಧಿಸಿದ ಭಿತ್ತಿ ಫಲಕಗಳನ್ನು ಹಿಡಿದು ಕೋಲಾಹಲವನ್ನು ಉಂಟು ಮಾಡಿದ ಪರಿಣಾಮ ಮೊದಲ ಬಾರಿಗೆ ಹತ್ತು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು.

ಚಾಲಕನ ಬಂಧನ: ಲೋಕಸತ್ತಾ ಪಾರ್ಟಿಯ ಶಾಸಕ ಎನ್.ಜಯಪ್ರಕಾಶ್ ನಾರಾಯಣ್ ಮೇಲೆ ಗುರುವಾರ ವಿಧಾನ ಸಭೆಯ ಅವರಣದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ತೆಲಂಗಾಣ ರಾಷ್ಟ್ರೀಯ ಸಮಿತಿಯ ಶಾಸಕ ಇ. ರಾಜೇಂದ್ರರ್ ಅವರ ವಾಹನ ಚಾಲಕನನ್ನು ಬಂಧಿಸಿಲಾಗಿದೆ. ಬಂಧಿತ ಚಾಲಕನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.