ಹೊನ್ನಾವರ (ಉ.ಕ. ಜಿಲ್ಲೆ): ಉತ್ತರ ಭಾರತದಲ್ಲಿ ಭಾರಿ ಪ್ರವಾಹ ಬಂದಿದ್ದು, ಆ ಭಾಗಕ್ಕೆ ಯಾತ್ರೆಗೆಂದು ಹೋಗಿದ್ದ ಇಲ್ಲಿನ ಕುಟುಂಬದ ಸದಸ್ಯರ ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನ 9 ಜನರು ಕಾಶಿ, ಹೃಶಿಕೇಶ ಮತ್ತಿತರ ಯಾತ್ರಾ ಸ್ಥಳಗಳಿಗೆ ಹೋಗಿದ್ದು, ಇವರ ಸುರಕ್ಷತೆಯ ಬಗ್ಗೆ ಮಂಗಳವಾರದ ವರೆಗೆ ಮಾಹಿತಿ ಸಿಕ್ಕಿತ್ತಾದರೂ ಬುಧವಾರ ಅವರೊಂದಿಗೆ ಸಂಪರ್ಕ ಸಾಧ್ಯವಾಗದಿರುವುದರಿಂದ ಈ ಯಾತ್ರಾರ್ಥಿಗಳ ಕುಟುಂಬದವರು ತೀವ್ರ ಕಳವಳಗೊಂಡಿದ್ದಾರೆ.

`ಮಂಗಳವಾರ ಸಂಜೆ ನನ್ನ ಮಗ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆದರೆ ಬುಧವಾರ ಬೆಳಿಗ್ಗೆಯಿಂದ ನನ್ನ ಮಗ ಸೂರಜ್ನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ' ಎಂದು ಚಿಕ್ಕನಕೋಡ ಗ್ರಾಮದ ವ್ಯಾಪಾರಿ ಬಾಳ ಶಾನಭಾಗ ಕಳವಳ ವ್ಯಕ್ತಪಡಿಸಿದ್ದಾರೆ.

ಸ್ವಾಮೀಜಿ ಸುರಕ್ಷಿತ
ಕಾರವಾರ: ಮಾನಸ ಸರೋವರ ಯಾತ್ರೆಗೆ ತೆರಳಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಉತ್ತರಾಖಂಡದ ಹೃಷಿಕೇಶದ ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ಆಶ್ರಮದಲ್ಲಿ ವಾಸ್ತವ್ಯ ಮಾಡಿದ್ದು, ಕ್ಷೇಮವಾಗಿದ್ದಾರೆ ಎಂದು ಉ.ಕ. ಜಿಲ್ಲೆಯ ಸಿದ್ದಾಪುರದ ಹವ್ಯಕ ಮಹಾಮಂಡಳದ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.