ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ವಿಚಾರಣೆ ಮುಂದಕ್ಕೆ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ (ಎ, ಬಿ ವೃಂದ) ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿ­ಎಸ್‌ಸಿ) ಮೂಲಕ 1998, 1999 ಮತ್ತು 2004ರಲ್ಲಿ ನಡೆದ ನೇಮಕಾತಿ­ಯಲ್ಲಿ ಆಗಿದೆ ಎನ್ನಲಾದ ಅವ್ಯವಹಾರ­ಗಳ ಕುರಿತು ಪರಿಶೀಲನೆ ನಡೆಸಲು ಹೈಕೋರ್ಟ್‌ ನೇಮಕ ಮಾಡಿದ್ದ ಸಮಿತಿ ವರದಿ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ಕೇಳಿದೆ.

ನೇಮಕಾತಿಯಲ್ಲಿ ಅವ್ಯವಹಾರ ನಡೆ­­ದಿದೆ ಎಂದು ದೂರಿ ಖಲೀಲ್‌ ಅಹ­ಮದ್‌ ಮತ್ತು ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಎಸ್‌.ಎನ್‌. ಸತ್ಯ­ನಾರಾ­ಯಣ ಅವರನ್ನೊಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ. ಸಮಗ್ರ ವರದಿಯನ್ನು ನೀಡಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಸಮಿತಿಯ ಸದಸ್ಯರು ಮಂಡಿಸಿದ ಕೋರಿಕೆ ಮನ್ನಿಸಿ, ಪೀಠ ವಿಚಾರಣೆ­ಯನ್ನು ಜನವರಿ 17ಕ್ಕೆ ಮುಂದೂಡಿತು.

ಸುನೀಲ್‌ ಕುಮಾರ್‌ ಅರ್ಜಿ ಇತ್ಯರ್ಥ: ‘ಶಾಸಕನಾದ ನಾನು ತತ್ಕಾಲ್‌ ಯೋಜ­ನೆ­ಯ ಅಡಿ ಪಾಸ್‌ಪೋರ್ಟ್‌ ಕೋರಿ ಅರ್ಜಿ ಸಲ್ಲಿಸಿದ್ದೆ. ಆದರೆ ಬೆಂಗಳೂರಿನ ಪ್ರಾದೇ­ಶಿಕ ಪಾಸ್‌ಪೋರ್ಟ್‌ ಅಧಿಕಾರಿ­ಗಳು ಮತ್ತು ವಿದೇಶಾಂಗ ಸಚಿವಾಲಯ ನನ್ನ ಅರ್ಜಿಯನ್ನು ಪರಿಗಣಿಸಿಯೇ ಇಲ್ಲ’ ಎಂದು ಕಾರ್ಕಳ ಶಾಸಕ, ಬಿಜೆಪಿಯ ವಿ. ಸುನೀಲ್‌ ಕುಮಾರ್‌ ಅವರು ಇತ್ತೀಚೆಗೆ ಸಲ್ಲಿಸಿದ್ದ ಅರ್ಜಿ­ಯನ್ನು ಹೈಕೋರ್ಟ್‌ ಇತ್ಯರ್ಥಪಡಿಸಿದೆ.

‘ಅರ್ಜಿ ಸಲ್ಲಿಸಿದ ನಂತರ ಸುನೀಲ್‌ ಕುಮಾರ್‌ ಅವರು ಪ್ರಾದೇಶಿಕ ಪಾಸ್‌­ಪೋರ್ಟ್‌ ಕಚೇರಿಗೆ ತೆರಳಿ ಸಂದರ್ಶನಕ್ಕೆ ಸಮಯ ನಿಗದಿಪಡಿಸಿಕೊಳ್ಳಲಿಲ್ಲ’ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಪ್ರತಿವಾದ ಮಂಡಿಸಿದ್ದರು. ಇದನ್ನು ಪರಿಗಣಿ­ಸಿದ ನ್ಯಾಯ­ಮೂರ್ತಿ ಎ.ಎಸ್‌. ಬೋಪಣ್ಣ ಅವರು ‘ಸುನೀಲ್‌ ಕುಮಾರ್‌ ಹೊಸ­ದಾಗಿ ಅರ್ಜಿ ಸಲ್ಲಿಸಬೇಕಿಲ್ಲ. ಆದರೆ ಅವರು ಅರ್ಜಿ ಸಲ್ಲಿಸಿರುವುದು ಹೌದಾ­ದರೆ, ಅದನ್ನು ಪರಿಗಣಿಸಬೇಕು. ಕಾನೂನು ಹೇಗೆ ಹೇಳುತ್ತದೆಯೋ ಅದರ ಅನ್ವಯವೇ ಶಾಸಕರಿಗೆ ಪಾಸ್‌­ಪೋರ್ಟ್‌ ನೀಡಬಹುದು’ ಎಂದು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT