ಮೈಸೂರು: ಕೇಂದ್ರ ಸಾಹಿತ್ಯ ಅಕಾಡೆಮಿಯು ಲೇಖಕಿ ಡಾ.ಎ.ಜಾನಕಿ ಅವರನ್ನು 2010 ನೇ ಸಾಲಿನ ಅತ್ಯುತ್ತಮ ಅನುವಾದ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಖ್ಯಾತ ಹಿಂದಿ ಸಾಹಿತಿ ದಿ.ಮುನ್ಷಿ ಪ್ರೇಮ್‌ಚಂದ್ ಅವರ ‘ಗೋದಾನ’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದಕ್ಕಾಗಿ ಈ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯು 50 ಸಾವಿರ ನಗದು ಹಾಗೂ ತಾಮ್ರಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ. ಆಗಸ್ಟ್ ತಿಂಗಳಲ್ಲಿ ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪರಿಚಯ: 1964ರಲ್ಲಿ ಮಹಾರಾಣಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು. 1993ರಲ್ಲಿ ಅದೇ ಕಾಲೇಜಿಗೆ ಪ್ರಾಂಶುಪಾಲರಾದರು. 1995-97ರ ಅವಧಿಯಲ್ಲಿ ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರು, 1997- 2001ರಲ್ಲಿ ಧಾರವಾಡದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದರು.

1943ರಲ್ಲಿ ಜನಿಸಿದ ಇವರು, 25ಕ್ಕೂ ಹೆಚ್ಚು ಕೃತಿಗಳನ್ನು ಅನುವಾದಿಸಿದ್ದಾರೆ. ಪ್ರೇಮ್‌ಚಂದ್‌ರ 300 ಸಣ್ಣ ಕಥೆಗಳನ್ನು 15 ಸಂಪುಟಗಳಲ್ಲಿ ಅನುವಾದ ಮಾಡಿದ್ದಾರೆ. ಪ್ರೇಮ್‌ಚಂದ್‌ರ ಪ್ರಮುಖ ಕೃತಿಗ ಳಾದ ‘ಸೇವಾಸದನ್’, ಗಬನ್, ವರದಾನ್ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.