ಮಂಡ್ಯ:  ಜಿಲ್ಲೆಯ ಅಕ್ರಮ ಮರಳು ಗಣಿಗಾರಿಕೆ ಅಡ್ಡೆಗಳ ಮೇಲೆ ಸತತ ಐದನೇ ದಿನವಾದ ಸೋಮವಾರವೂ ದಾಳಿ ಮುಂದುವರಿಸಿರುವ ಜಿಲ್ಲಾಡಳಿತವು ಇಲ್ಲಿಯವರೆಗೆರೂ1 ಕೋಟಿ ಮೌಲ್ಯದ ಮರಳು ಸೇರಿದಂತೆ ರೂ10 ಕೋಟಿ ಬೆಲೆಬಾಳುವ ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ.

`ಪ್ರಜಾವಾಣಿ'ಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಕುರಿತ ಸರಣಿ ವರದಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತ ವರದಿ ಪ್ರಕಟವಾದ ನಂತರ ಜಿಲ್ಲಾಡಳಿತವು ಅಕ್ರಮ ಮರಳು ಸಾಗಾಟದ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಆಡಳಿತ ವ್ಯವಸ್ಥೆ ಚುರುಕುಗೊಂಡಿದೆ.

ಕೆ.ಆರ್. ಪೇಟೆ ತಾಲ್ಲೂಕುವೊಂದರಲ್ಲಿಯೇ ರೂ75 ಲಕ್ಷ ಬೆಲೆ ಬಾಳುವ 500 ಲೋಡ್ ಮರಳು,ರೂ6 ಲಕ್ಷ ಮೌಲ್ಯದ ಪೈಪ್,ರೂ2.5 ಲಕ್ಷ ಬೆಲೆಯ ದೋಣಿ,10 ಹಿಟಾಚಿ, 6 ಜೆಸಿಬಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮದ್ದೂರು ತಾಲ್ಲೂಕಿನ ನವಿಲೆ ಗ್ರಾಮದ ಬಳಿ ವಶಪಡಿಸಿಕೊಂಡಿದ್ದರೂ1.68 ಲಕ್ಷ ಬೆಲೆಯ ಮರಳನ್ನು ಹರಾಜು ಮಾಡಿ ಮಾರಾಟ ಮಾಡಲಾಗಿದೆ.

ಮಳವಳ್ಳಿ ತಾಲ್ಲೂಕಿನ ಪೂರಿಗಾಲಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಪಡಿಸಿಕೊಳ್ಳಲಾಗಿದೆ.ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠ ಭೂಷಣ ಬೊರಸೆ ದಾಳಿಯ ನೇತೃತ್ವ ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.