ಕಾರವಾರ: ದಾಖಲೆಯಲ್ಲಿನ ಗೊಂದಲ ದಿಂದಾಗಿ ಒಂದು ವಾರದಿಂದ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದ್ದ ವಿದೇಶಿ ಹಡಗು ಭಾನುವಾರ ರಾತ್ರಿ ವಾಪಸ್ ಮರಳಿದ್ದು, ಹಲವು ಸಂಶಯಗಳಿಗೆ ಕಾರಣವಾಗಿದೆ.

‘ಶಾರ್ಜಾ’ದ ‘ಕ್ಲೆಟನ್–2’ ಎನ್ನುವ ಈ ಹಡಗು ಬಿಟುಮಿನ್ (ಟಾರ್) ಹೇರಿಕೊಂಡು ಫೆ.28 ರಂದು ಕಾರವಾರ ಬಂದರಿಗೆ ಬಂದಿತ್ತು. ಆದರೆ, ಹಡಗಿನ ದಾಖಲೆಯಲ್ಲಿನ ಗೊಂದಲ ದಿಂದಾಗಿ ಇಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಹಡಗನ್ನು ವಶಕ್ಕೆ ಪಡೆದಿದ್ದರು. ಹೀಗಾಗಿ ಹಡಗು ಇಲ್ಲಿನ ಅರಬ್ಬಿ ಸಮುದ್ರದಲ್ಲಿರುವ ಕೂರ್ಮಗಡ ಗುಡ್ಡದ ಬಳಿ ಲಂಗರು ಹಾಕಿತ್ತು.

ಸತತ ಒಂದು ವಾರ ದಾಖಲೆ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳು ಶನಿವಾರ ಬಂದರಿಗೆ ಬರಲು ಹಡಗಿಗೆ ಅವಕಾಶ ನೀಡಿದ್ದರು. ಅದೇ ದಿನ ಈ ಹಡಗು ಕಾರವಾರ ಬಂದರಿನಲ್ಲಿ 2,700 ಮೆಟ್ರಿಕ್ ಟನ್ ಬಿಟುಮಿನ್ ಖಾಲಿ ಮಾಡಿ ವಾಪಸ್ ಮರಳಿದೆ ಎಂದು ಬಂದರು ಇಲಾಖೆ ಅಧಿಕಾರಿ ಗಳು ತಿಳಿಸಿದ್ದಾರೆ.

ಆದರೆ, ಈ ಹಡಗು ಕಾರವಾರಕ್ಕೆ ಬಂದ ದಿನ ‘ಯಾವುದೇ ದಾಖಲೆಗಳಿಲ್ಲದೆ ವಿದೇಶಿ ಹಡಗೊಂದು ಅಕ್ರಮವಾಗಿ ಭಾರತದ ಗಡಿಯನ್ನು ಪ್ರವೇಶಿಸಿದೆ’ ಎನ್ನುವ ಸುದ್ದಿ ಕಸ್ಟಮ್ಸ್ ಅಧಿಕಾರಿಗಳಿಂದಲೇ ಹೊರಬಿದ್ದಿತ್ತು. ಈಗ ಹಡಗು ವಾಪಸ್ ಮರಳಿದರೂ, ಕಸ್ಟಮ್ಸ್ ಅಧಿಕಾರಿಗಳು ಹಡಗಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.