ಮದ್ದೂರು: ಉತ್ತರ ಭಾರತದ ಕೇದಾರನಾಥ ತೀರ್ಥ ಕ್ಷೇತ್ರದಲ್ಲಿ ಜಲಪ್ರವಾಹಕ್ಕೆ ಸಿಲುಕಿ ಕಾಣೆಯಾಗಿದ್ದ ಪಟ್ಟಣದ 13 ನಿವಾಸಿಗಳ ಸುಳಿವು ಶನಿವಾರವೂ ಕೂಡ ಸಿಕ್ಕಿಲ್ಲ.ಪ್ರವಾಸಕ್ಕೆ ತೆರಳಿದ್ದ 18ಮಂದಿಯಲ್ಲಿ ಜಿ.ಎಂ. ಸೀತರಾಮು, ಅನಂತು, ಕೃತಿ, ರವಿಚಂದ್ರ, ನವ್ಯಶ್ರೀ ಅವರು ಕೇದಾರನಾಥದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಸುರಕ್ಷಿತವಾಗಿದ್ದಾರೆ.

ಆದರೆ, ಅವರೊಡನೆ ತೆರಳಿದ್ದ ಎಂ.ಜಿ. ನಾಗರಾಜರಾವ್, ಎಂ.ಜಿ. ಗುರುರಾಜ್, ಎಂ.ಜಿ. ರಮೇಶ್, ಸುಮಾ ನಾಗರಾಜರಾವ್, ನಾಗಶ್ರೀ, ಅತುಲ್ಚಂದ್ರ, ಅಮಿತ್ಚಂದ್ರ, ನಾಗಲಕ್ಷ್ಮೀ, ಅನಿರುದ್ಧ, ವಸಂತಕುಮಾರ್, ಗೀತಾ ಎಲ್ಲಿದ್ದಾರೆ ಎಂಬ ಸುಳಿವು ಪತ್ತೆಯಾಗಿಲ್ಲ.ಆಗ್ರಹ: ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಐದು ಮಂದಿಯನ್ನು ಈ ಕೂಡಲೇ ರಾಜ್ಯಕ್ಕೆ ವಾಪಸ್ ಕರೆತರಲು ಅಗತ್ಯ ನೆರವು ನೀಡಬೇಕು.

ಅಲ್ಲದೇ, ನಾಪತ್ತೆಯಾದ 13 ಯಾತ್ರಿಗಳ ಪತ್ತೆಗೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ನಾಪತ್ತೆಯಾಗಿರುವವರ ಹತ್ತಿರದ ಸಂಬಂಧಿ ಎಂ.ಕೆ. ಸುಜಯಸಿಂಹ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.